ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪ್ರಜಾಪ್ರಭುತ್ವದಲ್ಲೂ ಕಷ್ಟ ತಪ್ಪಿಲ್ಲ

Lingaraj Badiger
Updated On : 23 Sept 2013, 11:08 am

ಸಿಂಧನೂರು: ಹೈ-ಕ ಏಳ್ಗೆಗೆ 371(ಜೆ) ಕಲಂ ಅವಶ್ಯ. ಅದು ಜಾರಿಯಾದರೆ ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಉತ್ತಮ ಯೋಜನೆಗಳು ಲಭಿಸಲಿವೆ. ದೇಶ ಸ್ವತಂತ್ರವಾಗಿ ಏಳು ದಶಕಗಳಾಗುತ್ತಾ ಬಂದರೂ ನಾವು ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆ ಬದಲಾವಣೆಯಾಗಿದ್ದರೂ ನಮ್ಮ ಬವಣೆ, ಕಷ್ಟಗಳು ಇನ್ನೂ ತಪ್ಪಿಲ್ಲ ಎಂದು ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಶರಣಪ್ಪ ನಟೇಕಲ್ ಹೇಳಿದರು.
ತಾಲೂಕಿನ ಜವಳಗೇರಾ ಸರ್ಕಾರಿ ಪಪೂ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
371(ಜೆ) ಕಲಂನ ಪ್ರಯೋಜನೆಗಳು ಕುರಿತು ರಾಜ್ಯ ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಓತೂರು ಉಪನ್ಯಾಸ ನೀಡಿದರು. ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ವಿರುಪನಗೌಡ ಮಾತನಾಡಿರು. ಕಾಲೇಜಿನ ಪ್ರಾಚಾರ್ಯರು, ಗುಲ್ಬರ್ಗ ವಿಭಾಗದ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಎಸ್.ಶಿವರಾಜ ಹಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜವಳಗೇರಾ ಕಾಲೇಜಿನ ಎನ್ನೆಸ್ಸೆಸ್ ವತಿಯಿಂದ ಜಗದೀಶ ಓತೂರು, ಉಪನ್ಯಾಸಕರ ಸಂಘದ ಅಧ್ಯಕ್ಷ ವಿರುಪನಗೌಡ, ಶರಣಪ್ಪ ನಟೇಕಲ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಉಪನ್ಯಾಸಕ ಶಂಕ್ರಪ್ಪ ವೈ ಮಾತನಾಡಿದರು. ಎನ್ನೆಸ್ಸೆಸ್ ಅಧಿಕಾರಿ ಬಸವಲಿಂಗಯ್ಯಸ್ವಾಮಿ, ಉಪನ್ಯಾಸಕರಾದ ಮಲ್ಲಿಕಾರ್ಜುನ, ಇಂದುಮತಿ, ಶೀಲಾ, ನಾರಾಯಣ ಉಪಸ್ಥಿತರಿದ್ದರು. ಭೀರಪ್ಪ ಸ್ವಾಗತಿಸಿ, ಅಮಲ ನಿರೂಪಿಸಿದರು. ಬಸೀರಾ ಬೇಗಂ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement