ಆರ್ಥಿಕ ಸ್ವಾವಲಂಬನೆಯಿಂದ ಸುಂದರ ಬದುಕು
ಕನ್ನಡಪ್ರಭ ವಾರ್ತೆ ಸಿಂಧನೂರು ಸೆ.23
ಆರ್ಥಿಕವಾಗಿ ಸಶಕ್ತರಾಗಿ ಸ್ವಾವಲಂಬಿಗಳಾದಾಗ ಮಾತ್ರ ಬದುಕು ಸುಂದರವಾಗುತ್ತದೆ ಎಂದು ಆದಿತ್ಯ ನಾರಾಯಣ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಕೆಂಗಲ್ ಹೇಳಿದರು.
ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಇತ್ತೀಚೆಗೆ ಆದಿತ್ಯ ನಾರಾಯಣ ಪತ್ತಿನ ಸೌಹಾರ್ದ ಸಹಕಾರಿ ಸದಸ್ಯರ 2ನೇ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬ್ಯಾಂಕ್ ಆರಂಭವಾಗಿ ಕೇವಲ 9 ತಿಂಗಳ ಅವಧಿಯಲ್ಲಿ ಕೋಟ್ಯಂತರ ವ್ಯವಹಾರ ಮಾಡಿದೆ. 4 ವರ್ಷಗಳ ಹಿಂದೆ ಆರಂಭವಾದ ಬ್ಯಾಂಕುಗಳನ್ನು ಸಂಸ್ಥೆ ಹಿಂದೆ ಹಾಕಿ ಬೆಳೆದಿದೆ.
ಇದುವರೆಗೂ ಬ್ಯಾಂಕ್ 32,91,448 ಸಾಲ ನೀಡಿದೆ. 36,13,000 ಷೇರು ಬಂಡವಾಳ, 39,01,815 ಠೇವಣಿಗಳನ್ನು ಹೊಂದಿದೆ. 5 ಲಕ್ಷ ವಿವಿಧ ಹೂಡಿಕೆಗಳಿವೆ. ಪ್ರಸ್ತುತ ಆರಂಭದ ವರ್ಷವಾಗಿರುವುದರಿಂದ 1,22,343 ನಷ್ಟ ತೋರಿಸುತ್ತಿದೆ. ಆದರೆ ಮುಂದಿನ ವರ್ಷ ಸಂಸ್ಥೆ ಠೇವಣಿದಾರರಿಗೆ ಲಾಭಾಂಶವನ್ನು ಕೊಡುತ್ತದೆ ಎಂದರು.
ಶಾಲಾ- ಕಾಲೇಜು ಕಟ್ಟಿ ಬೆಳೆಸಿ: ಕಾರ್ಯಕ್ರಮವನ್ನು ಉದ್ದೇಶಿ ಸಂಸ್ಥೆಯ ಉಪಾಧ್ಯಕ್ಷ ರಾಮರಾವ್ ಕುಲಕರ್ಣಿ ಮಾತನಾಡಿ, ಆದಿತ್ಯ ನಾರಾಯಣ ಸಹಕಾರಿ ಸಂಸ್ಥೆ ಇಡೀ ಜಿಲ್ಲೆಯಲ್ಲಿ ವಿಪ್ರ ಸಮುದಾಯದ ಹೆಮ್ಮೆಯ ಸಂಸ್ಥೆಯಾಗಿದೆ. ವಿಪ್ರ ಸಮುದಾಯ ಎಲ್ಲ ರಂಗಗಳಲ್ಲಿ ಹಿಂಜರಿಕೆಯಿಲ್ಲದೆ ಮುಂದುವರೆಯಬೇಕು. ಸಹಕಾರಿ ಸಂಸ್ಥೆಯ ಜೊತೆಗೆ ಶಾಲಾ ಕಾಲೇಜುಗಳನ್ನು ಕಟ್ಟಿ ಬೆಳೆಸಬೇಕು ಎಂದು ಮನವಿ ಮಾಡಿದರು.
ಸಂಸ್ಥೆಯ ನಿರ್ದೇಶಕ ಮನೋಹರ ಹುದ್ದಾರ, ಶ್ರೀಧರ ಕುಲಕರ್ಣಿ, ಪತ್ರಕರ್ತ ಪ್ರಹ್ಲಾದ ಗುಡಿ, ಬ್ಯಾಂಕಿನ ಷೇರುದಾರರಾದ ವೆಂಕಣ್ಣಾಚಾರ್ ದೋಟಿಹಾಳ, ರಮೇಶ ನರೇಗಲ್, ಶಿಕ್ಷಕಿ ಲಕ್ಷ್ಮಿದೇವಿ, ನಿವೃತ್ತ ಶಿಕ್ಷಕ ತಿರುಮಲರಾವ್ ಕುಲಕರ್ಣಿ, ರಾಘವೇಂದ್ರ ಜವಳಗೇರಾ ಮಾತನಾಡಿದರು.
ಪಾಂಡುರಂಗ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರಿಯ ಸಿಇಒ ಅಜಯಕಾನಿಹಾಳ ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಸುಶ್ಮಾ ಜೋಷಿ ಪ್ರಾರ್ಥಿಸಿದರು. ಹನುಮೇಶ ಜಾಗೀರದಾರ ಸ್ವಾಗತಿಸಿ ವಂದಿಸಿದರು. ರೇಣುಕಾ ಕುಲಕರ್ಣಿ ನಿರೂಪಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರು,ಸಿಬ್ಬಂದಿ, ಸಹಕಾರಿ ಸದಸ್ಯರು ಪಾಲ್ಗೊಂಡಿದ್ದರು.