ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಕರ್ತವ್ಯ, ಹಕ್ಕು ಅರಿತು ಬಾಳಿ'

Rashmi Kasaragodu
Updated On : 24 Sept 2013, 11:44 am

ಕನ್ನಡಪ್ರಭ ವಾರ್ತೆ, ಅಫಜಲ್ಪುರ, ಸೆ.23
ಈ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಪ್ರಜೆಗಳು ದೇಶದ ಸಂವಿಧಾನಕ್ಕಿಂತ ದೊಡ್ಡವರಲ್ಲ. ನಾವು ಎಷ್ಟು ದೊಡ್ಡ ಹುದ್ದೆ ಹೊಂದಿದ್ದರು ನಾವು ಕಾನೂನಿನ ಮುಂದೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರು ಅವರವರ ಕರ್ತವ್ಯಗಳನ್ನು ಅರಿತು ಬಾಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಆರ್ ವೆಂಕಟಸುದರ್ಶನ ಹೇಳಿದರು.
ಪಟ್ಟಣದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಅಫಜಲ್ಪುರ ತಾಲೂಕು ನ್ಯಾಯವಾದಿಗಳ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಅಫಜಲ್ಪುರ ಇವರ ಸಂಯುಕ್ತಾಶ್ರಯದಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಧೀಶರಾದ ವಾಸುದೇವ ಗುಡಿ, ವಕೀಲರಾದ ಎಸ್.ಜಿ ಹೂಲ್ಲೂರ, ಸಹಾಯಕ ಸರ್ಕಾರಿ ಅಭಿಯೋಜಕ ಪ್ರಶಾಂತಕುಮಾರ್ ಡಿ, ಕೆ.ಜಿ. ಪೂಜಾರಿ ಮಾತನಾಡಿದರು.
ರೂಲೇಕರ್ ನಾರಾಯಣ, ಮಲ್ಲಿಕಾರ್ಜುನ ಶಾವಿ, ಎಚ್.ಸಿ. ಪಾಟೀಲ್, ವಕೀಲರಾದ ಎಸ್.ಎಸ್. ಪಾಟೀಲ್, ವೈ.ಎಸ್. ಸಾಲಿಮನಿ, ಸಿದ್ರಾಮಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು.
ಲತಾ ಡಿ. ಡೊಂಗರೆ ಸ್ವಾಗತಿಸಿದರು. ಭಾಗ್ಯಜ್ಯೋತಿ ಬಸವರಾಜ ನಿರೂಪಿಸಿದರು. ಸೂಗೂರೇಶ್ವರ ಆರ್.ಎಂ. ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement