ಪೌರಕಾರ್ಮಿಕರ ಖಾತೆಗೆ 2 ಸಾವಿರ ಭತ್ಯೆ: ಸೈಯದ್ ಜಾಫರ್
ಸಿಂಧನೂರು: ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯವರ ಆದೇಶದನ್ವಯ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರ ಖಾತೆಗೆ 2 ಸಾವಿರ ವಿಶೇಷ ಭತ್ಯೆ ಜಮಾ ಮಾಡಲಾಗುವುದು ಎಂದು ನಗರಸಭಾಧ್ಯಕ್ಷ ಸೈಯದ್ ಜಾಫರ ಅಲಿ ಜಾಗೀರದಾರ ಹೇಳಿದರು.
ನಗರಸಭೆಯಲ್ಲಿ ಸೋಮವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು. ಪೌರಕಾರ್ಮಿಕರು ದಿನನಿತ್ಯ ನಗರವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿರುತ್ತಾರೆ.ಅವರ ಬಟ್ಟೆ ಕೊಳೆಯಾದರೂ ನಗರವನ್ನು ಶುಭ್ರಗೊಳಿಸುವಲ್ಲಿ ಆನಂದವನ್ನು ಕಾಣುತ್ತಾರೆ. ಸರ್ಕಾರ ಇದೆ ಮೊದಲ ಬಾರಿಗೆ ಪೌರಕಾರ್ಮಿಕರ ದಿನಾಚರಣೆ ಆರಂಭಿಸಿರುವುದು ಸಂಸತ ತಂದಿದೆ.
ಅವರ ಬದುಕಿಗೆ ನೆರವಾಗಲು ಸರ್ಕಾರ ಘೋಷಿಸಿದಂತೆ ಪ್ರತಿಯೊಬ್ಬ ಪೌರಕಾರ್ಮಿಕರ ಖಾತೆಗೆ ತಲಾ ಎರಡು ಸಾವಿರ ರೂ ವಿಶೇಷ ಭತ್ಯೆ ಜಮಾ ಮಾಡಲಾಗುವುದು ಎಂದರು.
ನಗರಸಭೆ ಪೌರಾಯುಕ್ತ ನಾಸೀರ ಅಲಿ ಮಾತನಾಡಿದರು.
ನಗರಸಭಾ ಸದಸ್ಯ ಲಿಂಗರಾಜ ಹೂಗಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಾದ ಬೇದು, ಕರಿಯಪ್ಪ, ದುರುಗಪ್ಪ, ಹನುಮಂತ ಅವರನ್ನು ನಗರಸಭಾಧ್ಯಕ್ಷರು, ಪೌರಾಯುಕ್ತರು, ನಗರಸಭಾ ಸದಸ್ಯರು ಆತ್ಮೀಯವಾಗಿ ಸನ್ಮಾನಿಸಿದರು.
ನರಸಪ್ಪ ಸ್ವಾಗತಿಸಿ ಶರಣಬಸಯ್ಯ ನಿರೂಪಿಪಿಸಿದರು.
ನಗರಸಭೆ ಸದಸ್ಯರಾದ ಚಂದ್ರಶೇಖರ ಮೈಲಾರ, ನಬೀಸಾಬ, ಹಾಜಿ ಮಸ್ತಾನ, ಮುಖಂಡರಾದ ಜಗದೀಶ ಮ್ಯಾದಾರ, ಸ್ತ್ರೀಶಕ್ತಿ ಗುಂಪುಗಳ ಸದಸ್ಯರಾದ ಶ್ರೀದೇವಿ, ಕಮಲಾಬಾಯಿ, ನಾರಾಯಣಮ್ಮ ಮತ್ತಿತರರು ಭಾಗವಹಿಸಿದ್ದರು.