ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಸತಿ ಯೋಜನೆ: ಚೆಕ್ ನೀಡಲು ಒತ್ತಾಯಿಸಿ ಮನವಿ

Rashmi Kasaragodu
Updated On : 24 Sept 2013, 11:41 am

ದೇವದುರ್ಗ: ಪುರಸಭೆ ವ್ಯಾಪ್ತಿಯಲ್ಲಿನ ವಸತಿ ಯೋಜನೆಗಳ ಫಲಾನುಭವಿಗಳಿಗೆ ನೀಡಬೇಕಿರುವ ಚೆಕ್ ಕೂಡಲೇ ವಿತರಿಸುವಂತೆ ಕ್ರಾಂತಿ ಕಾರಿ ಯುವಜನರಂಗ (ಆರ್ವೈಎಫ್ಐ)ಸಂಘಟನೆಯ ನಗರ ಘಟಕ ಒತ್ತಾಯಿಸಿದೆ.
ಈ ಕುರಿತು ಸೋಮವಾರ ಸಂಘಟನೆಯ ಅಧ್ಯಕ್ಷ ಗುಂಡಪ್ಪ ದೊರೆ ನೇತೃತ್ವದಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಪುರಸಭೆ ವ್ಯಾಪ್ತಿಯ 23 ವಾರ್ಡುಗಳಲ್ಲಿ ಬಸವ, ವಾಜಪೇಯಿ, ನಮ್ಮ ಮನೆ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಈಗಾಗಲೇ ಮನೆ ನಿರ್ಮಿಸಿಕೊಂಡಿದ್ದಾರೆ. ಕೆಲ ಫಲಾನುಭವಿಗಳು ಹಣವಿಲ್ಲದ್ದರಿಂದ ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತಿವೆ. ಕೂಡಲೇ ವಸತಿ ಯೋಜನೆ ಅಡಿಯಲ್ಲಿರುವ ಫಲಾನುಭವಿಗಳಿಗೆ ಬಾಕಿ ಇರುವ ಹಣ ನೀಡಬೇಕು. ಆ ಮೂಲಕ ನೆರವಾಗಬೇಕೆಂದು ಒತ್ತಾಯಿಸಿದರು.
ಪಟ್ಟಣದ ಮುಖ್ಯ ರಸ್ತೆಗಳು ಸೇರಿ ಸಿ.ಸಿ. ರಸ್ತೆಗಳು, ಚರಂಡಿಗಳು ಸಂಪೂರ್ಣ ಹದಗೆಟ್ಟಿದ್ದು ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಪಟ್ಟಣದಲ್ಲಿ ಬಡ, ಕೃಷಿ ಕೂಲಿಕಾರರ ಬಿದ್ದ ಮನೆಗಳಿಗೆ ಪರಿಹಾರ ನೀಡಬೇಕು. ರಾಷ್ಟ್ರಪತಿ ಓಣಿಯಲ್ಲಿ ಮಹಿಳೆಯರಿಗಾಗಿ ನಿರ್ಮಿಸಿದ ಶೌಚಾಲಯವನ್ನು ಜನರ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು. ಖಾಜಾ ಹುಸೇನ್, ಮೌನೇಶ, ಚನ್ನಬಸವ, ಬಸವಲಿಂಗಪ್ಪ, ರಮೇಶ ಸಮೇದ್, ಮಲ್ಲಯ್ಯ ಕಟ್ಟಿಮನಿ, ಸದಾಶಿವ ಗೋಪಾಳಪುರ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement