ವಿಭಾಗಮಟ್ಟದ ಪ್ರಶಸ್ತಿ ರದ್ದು: ಗೌಳಿ ಆಕ್ಷೇಪ
ಗುಲ್ಬರ್ಗ: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪ್ರಶಸ್ತಿ ಪ್ರತಿವರ್ಷ ವಿಭಾಗ ಮಟ್ಟದಲ್ಲಿ ಕೊಡಲಾಗಿದ್ದು, ಆದರೆ, ಈ ವರ್ಷ ರಾಜ್ಯಮಟ್ಟದಲ್ಲಿ ಒಂದು ಪ್ರಶಸ್ತಿ ನೀಡಿ ವಿಭಾಗ ಮಟ್ಟದ ಪ್ರಶಸ್ತಿ ರದ್ದುಪಡಿಸಿರುವುದಕ್ಕೆ ಅಲೆಮಾರಿ, ಅರೆ ಅಲೆಮಾರಿ ಗುಲ್ಬರ್ಗ ಸಲಹಾ ಸಮಿತಿ ಸದಸ್ಯ ಸುಭಾಷ ಜಿ. ಗೌಳಿ ಆಕ್ಷೇಪಿಸಿದ್ದಾರೆ.
ಬರಗೂರ ರಾಮಚಂದ್ರ ನೇತೃತ್ವದ ಸಮಿತಿ ವಿಭಾಗ ಮಟ್ಟದಲ್ಲಿ ಪ್ರಶಸ್ತಿ ಕೊಡುವುದು ರದ್ದು ಮಾಡಿದ್ದು, ತಳಮಟ್ಟ ಮತ್ತು ಅಂತಿ ಹಿಂದುಳಿದ ವರ್ಗ ಮುಖಂಡರಿಗೆ ಅನ್ಯಾಯವಾಗಿದೆ. ಆದಕಾರಣ ಇದರ ಬಗ್ಗೆ ವಿಚಾರ ಮಾಡಿ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದ್ದಾರೆ.
ನಾನು ಕಳೆದ 5 ವರ್ಷಗಳಿಂದ ವಿಭಾಗ ಮಟ್ಟದ ಪ್ರಶಸ್ತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಸರ್ಕಾರ ತಮಗೆ ಬೇಕಾದವರಿಗೆ ಪ್ರಶಸ್ತಿ ನೀಡುತ್ತಿದೆ ಎಂದು ಆರೋಪಿಸಿದ ಅವರು, ಈ ಪ್ರಶಸ್ತಿ ರಾಜ್ಯ, ವಿಭಾಗ ಮತ್ತು ಜಿಲ್ಲೆ ಮಟ್ಟದಲ್ಲಿ ನೀಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.