ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಹೊರಗುತ್ತಿಗೆ ಬೇಡ'

Rashmi Kasaragodu
Updated On : 24 Sept 2013, 11:41 am

ಕ.ಪ್ರ.ವಾರ್ತೆ ಟಿ ರಾಯಚೂರು ಟಿ ಸೆ.23
ವಸತಿ ನಿಲಯಗಳಿಗೆ ಹೊರಗುತ್ತಿಗೆ ಮೂಲಕ ಕಾರ್ಮಿಕರ ನೇಮಕಕ್ಕೆ ಕರೆದಿರುವ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ನಗರದಲ್ಲಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಪಂ ಕಚೇರಿ ಎದುರು ಆಲ್ ಇಂಡಿಯಾ ಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಪಂ ಸಿಇಒ ಗೆ ಮನವಿ ಸಲ್ಲಿಸಿ, ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿನ ಅಡುಗೆ ಸಹಾಯಕರು, ಅಡುಗೆಯವರ ಹುದ್ದೆಗೆ ಹೊರ ಗುತ್ತಿಗೆ ಮೂಲಕ ನೇಮಕಾತಿಗೆ ಮುಂದಾಗಿರುವ ಕ್ರಮವನ್ನು ಖಂಡಿಸಿ, ಪ್ರಕ್ರಿಯೆ ರದ್ದುಗೊಳಿಸಬೇಕು. ಹಾಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನೇ ಮುಂದುವರಿಸುವಂತೆ ಒತ್ತಾಯಿಸಿದರು.
ಸಂಕಷ್ಟ: ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ನೂರಾರು ಸಂಖ್ಯೆಯ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಪ ವೇತನದಲ್ಲಿಯೇ ದುಡಿಯುತ್ತಿರುವ ಇಂಥ ಕಾರ್ಮಿಕರು ಜೀವನ ನಿರ್ವಹಣೆಯ ಸಂಕಷ್ಟಗಳನ್ನು ಎದುರಿಸಿಯೂ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ರೀತಿಯ ಸೇವಾ ಭದ್ರತೆಯಿಲ್ಲದೇ ದುಡಿಯುತ್ತಿರುವ ಈ ಕಾರ್ಮಿಛಕರ ಬದಲಿಗೆ ಹೊರಗುತ್ತಿಗೆ ಮೂಲಕ ಬೇರೆಯವರನ್ನು ಖಾಸಗಿ ಏಜೆನ್ಸಿಗಳ ಮೂಲಕ ನೇಮಕಾತಿ ಮಾಡಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ಶೋಷಣೆ: ಹೊರಗುತ್ತಿಗೆ ಮೂಲಕ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುತ್ತಿಗೆದಾರರು ಪೂರ್ಣ ಪ್ರಮಾಣದ ವೇತನ ನೀಡದೇ ವಂಚಿಸುವುದು ಸಾಮಾನ್ಯ ಸಂಗತಿಯಾಗಿದೆ. ಕಾರ್ಮಿಕರಿಗೆ ನೀಡಬೇಕಾದ ವೇತನವನ್ನು ಸಲ್ಲದ ಕಾರಣವೊಡ್ಡಿ ಕಡಿತಗೊಳಿಸುವಂಥ ಘಟನೆಗಳೂ ಈಗಾಗಲೇ ನಡೆದಿದ್ದು, ಕಾರ್ಮಿಕರ ಶೋಷಣೆಗೆ ಮಿತಿಯಿಲ್ಲವಾಗಿದೆ ಎಂದು ಟೀಕಿಸಿದರು.
ಕಾರಣ ಕೂಡಲೇ ಹೊರಗುತ್ತಿಗೆ ಪದ್ಧತಿ ಮೂಲಕ ನೇಮಕಾತಿ ಪ್ರಕ್ರಿಯೆಗೆ ತಡೆಯೊಡ್ಡಬೇಕು.ಬೀದರ್ ಜಿಲ್ಲೆಯಲ್ಲಿ ಕೈಗೊಂಡಂತೆ ಕಾರ್ಮಿಕರ ಸಂಘವನ್ನು ರಚಿಸಿ ವಸತಿ ನಿಲಯಗಳಿಗೆ ಕಾರ್ಮಿಕರ ಸೇವೆ ಪಡೆಯಬೇಕು. ಪರಿಷ್ಕೃತ ವೇತನವನ್ನು ಕೂಡಲೇ ಕಾರ್ಮಿಕರಿಗೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವವನ್ನು ರಾಮಣ್ಣ ಮತ್ತಿತರರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement