ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಭಿವೃದ್ಧಿಗಾಗಿ ಸಹಕಾರಿಗಳು ಕಾರ್ಯನಿರ್ವಹಿಸಲಿ

Rashmi Kasaragodu
Updated On : 25 Sept 2013, 11:40 am

ಸಿಂಧನೂರು: ಪತ್ತಿನ ಸಹಕಾರಿ ಸಂಘಗಳು ಆರ್ಥಿಕ ಚಟುವಟಿಕೆಗಳ ನಡುವೆಯೂ ಅಭಿವೃದ್ಧಿ ದೃಷ್ಟಿಕೋನವನ್ನಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕಾಗಿದೆ. ಇದರಿಂದ ಸಮಾಜದ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಿದಂತಾಗುತ್ತದೆ ಎಂದು ತುಂಗಭದ್ರ ಪತ್ತಿನ ಸೌಹಾರ್ದ ಸಹಕಾರಿ ಅಧ್ಯಕ್ಷ ದಿಲೀಪಕುಮಾರ ಸಕಲೇಚಾ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನವೀಯ ಸ್ಪರ್ಶ ಅಗತ್ಯ: ಅವರು ನಗರದ ಗಂಗಾವತಿ ರಸ್ತೆಯಲ್ಲಿ ತುಂಗಭದ್ರ ಸಹಕಾರಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ 13ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿ ಅಭಿವೃದ್ಧಿಯನ್ನು ಅದು ಹೊಂದಿರುವ ಕಟ್ಟಡಗಳಿಂದ, ನಡೆಸುವ ವಹಿವಾಟಿನಿಂದ ಗುರುತಿಸಲಾಗುವುದಿಲ್ಲ. ಮಾನವೀಯ ಸ್ಪರ್ಶ ಅಗತ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರಿ ನಿರ್ದೇಶಕ ಅಮರೇಶ ಮೈಲಾರ, ಸಂಸ್ಥಾಪಕ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ ಅವರ ಕನಸಿನ ಕೂಸಾಗಿ ರು. 3 ಲಕ್ಷ ಸದಸ್ಯ ಶೇರು ಬಂಡವಾಳದಿಂದ ಆರಂಭವಾಗಿ ಈಗ 10 ಕೋಟಿ ವಹಿವಾಟು ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಮುಂಗಡ ಪತ್ರ: ಈ ಸಂದರ್ಭದಲ್ಲಿ ಕಳೆದ ವರ್ಷದ ಆರ್ಥಿಕ ವರದಿ 2013-14ನೇ ಸಾಲಿನ ಮುಂಗಡ ಪತ್ರವನ್ನು ಸಹಕಾರಿ ಶಾಖಾ ವ್ಯವಸ್ಥಾಪಕ ಡಿ.ಹುಸೇನಸಾಬ ಸಭೆಗೆ ಮಂಡಿಸಿ ಅನುಮೋದನೆ ಪಡೆದರು.
ಕನಕಗುರು ಪೀಠದ ನಂಜುಂಡಯ್ಯ ಗುರುವಿನ್ ಸಭೆ ಸಾನ್ನಿಧ್ಯ ವಹಿಸಿದ್ದರು. ತಾ.ಪಂ. ಮಾಜಿ ಅಧ್ಯಕ್ಷ ರಮೇಶಪ್ಪ ದಿದ್ದಗಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲಂಕೆಪ್ಪ ಸಿಂಗಾಪುರ,ಅಹಿಂದ ಅಧ್ಯಕ್ಷ ಕರೇಗೌಡ ಕುರುಕುಂದಿ,ನಿರ್ದೇಶಕ ಕೆ.ಭೀಮಣ್ಣ ವಕೀಲರ, ಅಭಯ್ ಕುಮಾರ ಸಕಲೇಚಾ, ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸವ ಮಾನ್ವಿ, ತುರ್ವಿಹಾಳ ಶಾಖಾ ವ್ಯವಸ್ಥಾಪಕ ಶಿವಗ್ಯಾನಪ್ಪ ಇದ್ದರು. ಸಂಸ್ಥೆ ಉಪಾಧ್ಯಕ್ಷ ಸೈಯ್ಯದ್ ಮಹೆಬೂಬ್ ಮಿಟ್ಟಿಮನಿ ಸ್ವಾಗತಿಸಿದರು. ಪಂಪಯ್ಯ ಸ್ವಾಮಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement