ಪ್ರಾಥಮಿಕ ಕೃಷಿ ಸಹಕಾರ ಸಂಘದ ವಾರ್ಷಿಕ ಸಭೆ
ಲಿಂಗಸ್ಗೂರು: ತಾಲೂಕಿನ ದೇವರಭೂಪೂರು ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ ಜರುಗಿತು. ಸಭೆಯಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಅಮರೇಶ ಫೂಲಬಾವಿ ಮಾತನಾಡಿ, ಗ್ರಾಹಕರ ಸಹಕಾರದಿಂದ ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ರೈತರಿಗೆ ಸಾಲ ಸೌಲಭ್ಯ ನೀಡುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದರು. ಸಭೆಯಲ್ಲಿ ನಿರ್ದೇಶಕ ಹನುಮನಗೌಡ ಪರಂಪೂರು, ಅಮರೇಶ ಚಲುವಾದಿ, ಶಿವನಗೌಡ ಪರಂಪೂರು, ನಾಗಮ್ಮ ಅಂಗಡಿ, ಗಂಗಪ್ಪ ಗೋದಿಕಲ್, ನೀಲಕಂಠಯ್ಯ ಸ್ವಾಮಿ, ಶಿವಾಜಿ ಪರಂಪೂರು ತಾಂಡ, ವೃತ್ತ ವೀಕ್ಷಕ ಸಂಗಮೇಶ ಬಿರಾದಾರ್, ಅಮರೇಶ ಯರಡೊಣಿ, ಬಸವರಾಜ ಪಾಟೀಲ್, ಎ.ಆರ್. ನಾಯಕ, ಮುದಕಪ್ಪ ಕರೆಕುರಿ ಉಪಸ್ಥಿತರಿದ್ದರು.
ಗ್ರಾಹಕರ ಆರ್ಥಿಕ ಸ್ವಾವಲಂಬನೆಗೆ ಒತ್ತು
ನೀಡಲು ಸಲಹೆ
ಮಸ್ಕಿ: ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಸಂಘಗಳು ಒತ್ತು ನೀಡಬೇಕೆಂದು ಜಿ.ಪಂ. ಸದಸ್ಯ ಮಹಾದೇವಪ್ಪಗೌಡ ಹೇಳಿದರು. ಅವರು ಪಟ್ಟಣದ ಭ್ರಮಾರಾಂಬಾ ದೇವಸ್ಥಾನದಲ್ಲಿ ಆಯೋಜಿಸಿದ್ದ ಸ್ಥಳೀಯ ಹಾಲಾಪೂರ ಪತ್ತಿನ ಸೌಹಾರ್ದಸಹಾಕಾರಿ ನಿಯಮಿತದ ಮೊದಲನೆ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಹಕಾರಿ ನಿಯಮಿತ ಅಧ್ಯಕ್ಷ ಬಸವರಾಜಪ್ಪಗೌಡ ಮಾತನಾಡಿದರು. ಪ್ರಾಸ್ತಾವಿಕವಾಗಿ ನಿಯಮಿತದ ನಿರ್ದೇಶಕ ಹಂಪನಗೌಡ ಪಾಟೀಲ್ ಮಾತನಾಡಿದರು. ನಿಯಮಿತದ ಉಪಾಧ್ಯಕ್ಷ ಹಳದಪ್ಪಗೌಡ, ನಿರ್ದೇಶಕರಾದ ಶೇಖರಪ್ಪ ಸುಂಕನೂರು, ಬಸವರಾಜ, ಡಾ.ನಾಗರಾಜ.ಬಿ, ವೆಂಕಟರೆಡ್ಡಿ ಪಿ., ಮರಿಗೌಡ, ಶಿವಕುಮಾರಗೌಡ ಪಾಟೀಲ್ ಮತ್ತಿತರರಿದ್ದರು.
ರಾಜ್ಯ ಸಮ್ಮೇಳನ
ರಾಯಚೂರು: ಚಿಕ್ಕಮಗಳೂರಿನಲ್ಲಿ ಸೆ.29, 30ರಂದು ಅಖಿಲ ಕರ್ನಾಟಕ ಕ್ರಾಂತಿಕಾರಿ ಮಹಿಳಾ ಸಂಘಟನೆಯ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ. ಅಂದು ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಸಮ್ಮೇಳನವನ್ನು ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಶರ್ಮಿಸ್ತಾ ಚೌಧರಿ ಉದ್ಘಾಟಿಸಲಿದ್ದಾರೆ. ಕೆಆರ್ಎಸ್ ಸಂಘಟನೆ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಸಿಪಿಎಂಎಲ್ ರಾಜ್ಯ ಕಾರ್ಯದರ್ಶಿ ರುದ್ರೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ಸಂಘಟನೆ ಜಿಲ್ಲಾಧ್ಯಕ್ಷೆ ಎಂ.ಲಲಿತಾ ತಿಳಿಸಿದ್ದಾರೆ.