ಹದಗೆಟ್ಟ ರಸ್ತೆ: ಬಸ್ ಸಂಚಾರ ಸ್ಥಗಿತ- ಎಚ್ಚರಿಕೆ
ರಾಯಚೂರು: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು, ಅದರಿಂದಾಗಿ ಸಾರಿಗೆ ಸಂಸ್ಥೆಯು ಬಸ್ಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ವರ ರೆಡ್ಡಿ ತಿಳಿಸಿದ್ದಾರೆ.
ಲಿಂಗಸ್ಗೂರು ತಾಲೂಕು ವ್ಯಾಪ್ತಿಯಲ್ಲಿನ ಯರಡೋಣಾ ಕ್ರಾಸ್- ಹಟ್ಟಿ-ಹೀರಾ-ನವಲಕಲ್ ಕ್ರಾಸ್ ರಸ್ತೆ, ಹಟ್ಟಿ-ಗುಡದನಾಳ- ಲಿಂಗಸ್ಗೂರು, ರೋಡಲಬಂಡಾ- ಜಾಲಹಳ್ಳಿ, ಅಡವಿಬಾವಿ- ಚಿತ್ತಾಪುರ, ಹಟ್ಟಿ- ಕೋಠಾ-ಗುರುಗುಂಟಾ, ಮುದಗಲ್- ಅಂಕಲಿಮಠ ರಸ್ತೆಗಳು ತೀರಾ ಹದಗೆಟ್ಟಿದ್ದು, ಈ ಮಾರ್ಗಗಳಲ್ಲಿ ಕೆಟ್ಟ ರಸ್ತೆಯ ಕಾರಣಕ್ಕೆ ಸೆ.30 ರೊಳಗೆ ರಸ್ತೆಗಳ ದುರಸ್ತಿ ಸಾಧ್ಯವಾಗದಿದ್ದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.