ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸುಯತೀಂದ್ರರ ಬೃಂದಾವನ ಮಂಟಪ ನಿರ್ಮಾಣಕ್ಕೆ ಚಾಲನೆ

Rashmi Kasaragodu
Updated On : 2 Apr 2014, 1:22 am

ರಾಯಚೂರು: ಮಂತ್ರಾಲಯದಲ್ಲಿ ಇತ್ತೀಚೆಗೆ ಹರಿಪಾದೈಕ್ಯರಾದ ಶ್ರೀ ಸುಯತೀಂದ್ರ ತೀರ್ಥರ ಬೃಂದಾವನ ಮಂಟಪ ನಿರ್ಮಾಣ ಕಾಮಗಾರಿಗೆ ಯುಗಾದಿ ಹಬ್ಬದ ಸಂದರ್ಭ ಚಾಲನೆ ನೀಡಲಾಯಿತು.
ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಬೃಂದಾವನ ಮಂಟಪ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ, ಮಂಟಪ ನಿರ್ಮಾಣ ಕಾರ್ಯಕ್ಕೆ ಶ್ರೀಮಠವು 45 ಲಕ್ಷ ವೆಚ್ಚ ಮಾಡಲಿದೆ ಎಂದರು. ಈ ವೇಳೆ ಮಾತನಾಡಿದ ಶ್ರೀಗಳ ಆಪ್ತ ಕಾರ್ಯದರ್ಶಿ ಶ್ರೀ ಸುಯಮೀಂದ್ರಾಚಾರ್ಯರು, ಮೇ ತಿಂಗಳಲ್ಲಿ ಶ್ರೀಸುಯತೀಂದ್ರ ತೀರ್ಥರ ಬೃಂದಾವನ ನಿರ್ಮಾಣ ಹಿನ್ನೆಲೆ ಕಳಾಕರ್ಷಣ ನಡೆಯಲಿದ್ದು, ಶ್ರೀ ಸುಶಮೀಂದ್ರತೀರ್ಥರ ಬೃಂದಾವನದ ಬಲಭಾಗಕ್ಕೆ ಭವ್ಯ ಮಂಟಪದ ನಿರ್ಮಾಣ ನಡೆಯಲಿದೆ ಎಂದು ಹೇಳಿದರು.
ಯುಗಾದಿ ವಿಶೇಷ ಪೂಜೆ: ಮಂತ್ರಾಲಯದಲ್ಲಿ ಯುಗಾದಿ ಹಬ್ಬದ ಸಂದರ್ಭ ಶ್ರೀ ಸುಬುಧೇಂದ್ರತೀರ್ಥರು ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಅರಮನೆಗೆ 1.78 ಲಕ್ಷ ಮಂದಿ ಭೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement