ಆರೋಪ ಸತ್ಯಕ್ಕೆ ದೂರ: ಹಯ್ಯಾಳಕರ
ಗುಲ್ಬರ್ಗ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಕೆಲಸ ಮಾಡುತ್ತಿರುವ ಸಿಎಸ್ಓ (ಎಸ್ಪಿ) ಕಾಂತರಾಜಪ್ಪ ಹಾಗೂ ಇತರ ಅಧಿಕಾರಿಗಳ ಮೇಲೆ ಕೆಲವರು ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಈ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಬಿಎಂ ಎಸ್(ಭಾರತೀಯ ಮಜ್ದುರ ಸಂಘ)ದ ಪ್ರ. ಕಾರ್ಯದರ್ಶಿ ರಾಮಚಂದ್ರ ಹಯ್ಯಾಳಕರ ಹೇಳಿದ್ದಾರೆ. ಅನಾಮಧೇಯ ಪತ್ರದಲ್ಲಿ ಕಾಂತರಾಜಪ್ಪ ಸೇರಿದಂತೆ ಎಐಎನ್ಟಿಯುಸಿ ಹಿರಿಯ ಕಾರ್ಮಿಕ ಮುಖಂಡರಾದ ಈಶಾನ್ಯ ವಲಯದ ಪ್ರ. ಕಾರ್ಯದರ್ಶಿ ರಶೀದ ಜಾವೇದ, ಕಾರ್ಮಿಕ ಮುಖಂಡ ರಾಘವೇಂದ್ರ ಕುಲಕರ್ಣಿ ಹೆಸರನ್ನು ಹಾಕಿ ಅಶ್ಲೀಲ ಶಬ್ದಗಳಿಂದ ಕೂಡಿದ ಗಂಭೀರ ಸ್ವರೂಪದ ಆರೋಪಗಳು ಮಾಡಿ ಈಶಾನ್ಯವಲಯ ಕ್ಷೇಮಾಭಿವೃದ್ಧಿ ಸಂಘ, ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಸಲ್ಲಿಸಲಾಗಿದೆ. ಇದರಲ್ಲಿ ಮಾಡಲಾಗಿರುವ ಆರೋಪಗಳಲ್ಲಿ ಹುರುಳಿಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.