ಕಿರುಕುಳ: ಪ್ರಾಧ್ಯಾಪಕರ ವಜಾಗೊಳಿಸಿ
ಗುಲ್ಬರ್ಗ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಪಿಡಿಎ ವಿದ್ಯಾರ್ಥಿಗಳ ಹೋರಾಟ ಸಮಿತಿಯು ವಿದ್ಯಾರ್ಥಿಗಳ ಮೇಲೆ ಕಿರುಕುಳ ನೀಡುತ್ತಿರುವ ಪ್ರಾಧ್ಯಾಪಕ ಡಾ. ನರೇಂದ್ರ ಮುಸ್ತಾರೆ ಹಾಗೂ ಡಾ. ಸುಧೀರ ಪಾಟೀಲರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಎಚ್ಕೆಇ ಸೊಸೈಟಿ ಅಧ್ಯಕ್ಷರಿಗೆ ಸಮಿತಿ ಮನವಿ ಮಾಡಿತು.
'ಶಿಕ್ಷಣದ ಚಿತ್ಕಳೆ' ಬಿಡುಗಡೆ
ಗುಲ್ಬರ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎನ್.ಬಿ. ಪಾಟೀಲ್ ಷಷ್ಠಿಪೂರ್ತಿ ಹಾಗೂ ಶಿಕ್ಷಣದ ಚಿತ್ಕಳೆ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.
ರೋಟರಿ ಕ್ಲಬ್ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಡಿ.ಜಗನ್ನಾಥ ಮಾತನಾಡಿದರು.
ಬದಾಮಿ ಕರ್ನಾಟಕ ಲಲಿತಾ ಕಲಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಎಸ್.ಸಿ.ಪಾಟೀಲ ಪುಸ್ತಕ ಕುರಿತು ಮಾತನಾಡಿದರು. ಈ ಕೃತಿಯಲ್ಲಿ ಆತ್ಮ ಚಿತ್ಕಳೆ, ಅನುಬಂಧ ಚಿತ್ಕಳೆ, ಆತ್ಮೀಯ ಚಿತ್ಕಳೆ, ಅರಿವು ಚಿತ್ಕಳೆ, ಅಭಿವೃದ್ಧಿ ಚಿತ್ಕಳೆ ಎಂಬ ಐದು ವಿಭಾಗಗಳಿದ್ದು, ಒಟ್ಟು ವೈವಿಝ್ಯಮಯ ಲೇಖನಗಳನ್ನು ಒಳಗೊಂಡಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಚಿದ್ರೆ ಶಂಕ್ರಯ್ಯಾ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ರಾಧಾಕೃಷ್ಣರಾವ ಮದನಕರ್ ಉಪಸ್ಥಿತರಿದ್ದರು. ಆಯುಕ್ತರ ಕಾರ್ಯಾಲಯದ ನಿರ್ದೇಶಕ ಎ.ರುದ್ರಪ್ಪ, ಸಹ ನಿರ್ದೇಶಕ ಡಾ.ಎಚ್.ಬಾಲರಾಜು, ಡಿಡಿಪಿಐ ಬಿ ಪರಮೇಶ್ವರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೆಂಗಟಿ ಉಪಸ್ಥಿತರಿದ್ದರು.