ತಪ್ಪದೇ ಮತದಾನ ಮಾಡಿ ಹಕ್ಕನ್ನು ಚಲಾಯಿಸಿ: ಡಾ. ಸೈಯದ್
ಸಿಂಧನೂರು: ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಈ ಕುರಿತು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಮತದಾನ ಜಾಗೃತಿ ಮೂಡಿಸಲು ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸೈಯದ್ ಹುಸನ್ ಹುಸೇನಿ ಕರೆ ನೀಡಿದರು.
ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದ ಅವರು ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮುಕ್ತ, ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ವೈದ್ಯರುಗಳಾದ ರಮ್ಯ ದೀಪಿಕಾ, ಪ್ರಶಾಂತ, ಅಯ್ಯನಗೌಡ ಜಿ, ಎಂ. ವಿದ್ಯಾಶ್ರೀ, ಅಯ್ಯನಗೌಡ, ಅಂಬುಜಾ, ಮಂಜುನಾಥ ಅಣ್ಣಗೌಡರ, ವಿಶ್ವನಾಥ ಜಾಧವ, ಭಾಗೀರಥಿ, ಕ್ಷೇತ್ರ ಆರೋಗ್ಯಾಧಿಕಾರಿ ಈಶ್ವರ್ ಹೆಚ್. ದಾಸಪ್ಪನವರ, ದೀಪಕ ಎಸ್.ಗಾಡವಿ, ರಂಗನಾಥ ಜಿ, ಬಸಯ್ಯ, ರಾಘವೇಂದ್ರ, ಎ.ಐ. ಪಾಟೀಲ್, ಗುರುಶಾಂತಮ್ಮ, ಭಾಗ್ಯಮ್ಮ ಡಿ, ಶಿವರಾಜ ಈರಣ್ಣ ಬಿರಾದಾರ, ಹುಸೇನಪ್ಪ, ಸೂಗುರಪ್ಪ ಇದ್ದರು.