ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಂಭಾಪುರಿ ಜಗದ್ಗುರು ಗುಲ್ಬರ್ಗ ಪ್ರವಾಸ 6ರಿಂದ

Rashmi Kasaragodu
Updated On : 3 Apr 2014, 2:24 am

ಗುಲ್ಬರ್ಗ: ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಏ. 6ರಿಂದ 30ರವರೆಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಏ. 6ರ ಮುಂಜಾನೆ ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಧರ್ಮಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಸಂಜೆ ಫರತಾಬಾದ ಸಮೀಪವಿರುವ ಭಕ್ತ ಸರಡಗಿ ದೇವಸ್ಥಾನದ ಉದ್ಘಾಟನೆ ಮಾಡುವರು. ಏ. 7ರ ಬೆಳಗ್ಗೆ ಬೀದರ ಜಿಲ್ಲೆಯ ಕೊಡಂಬಲ ಹತ್ತಿರವಿರುವ ರೇಣುಕಾಚಾರ್ಯ ಮಂದಿರ ಉದ್ಘಾಟನೆ ಮಾಡಿ ಸಂಜೆ ಗುಲ್ಬರ್ಗ ತಾಲೂಕಿನ ಸ್ಟೇಷನ್ ಬಬಲಾದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುವರು. ಏ. 8ರಂದು ಚಿತ್ತಾಪುರ ತಾಲೂಕಿನ ಹೊನಗುಂಟಿ ಗ್ರಾಮದ ರಾಚೋಟೇಶ್ವರ ಶಿವಾಚಾರ್ಯರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಏ. 9ರಂದು ಗುಲ್ಬರ್ಗ ನಗರದಲ್ಲಿ ರೇಣುಕಾಚಾರ್ಯ ಜಯಂತಿ ಧರ್ಮ ಸಮಾರಂಭದಲ್ಲಿ ಭಾಗಿಯಾಗುವರು. ಏ.10ರಂದು ಹುಮನಾಬಾದ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಹಿರೇಮಠದ ಪಟ್ಟಾಧಿಕಾರ ಸಮಾರಂಭದಲ್ಲಿ ಭಾಗವಹಿಸುವರು. ಏ.11ರಂದು ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಭಂಗಿಮಠ ಪಟ್ಟಾಧಿಕಾರ ಧರ್ಮ ಸಮಾರಂಭ ನಡೆಯಲಿದೆ ಎಂದು ಆಲಗೂಡಕರ್ ತಿಳಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement