ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಿವಿಗೊಡದಿರಲು ಲಿಂಗಾಯತರಿಗೆ ಮನವಿ

Rashmi Kasaragodu
Updated On : 7 Apr 2014, 11:39 am

ದೇವದುರ್ಗ: ಬಿಜೆಪಿಯ ಕೆಲ ಲಿಂಗಾಯತ ಸಮಾಜದ ಮುಖಂಡರು ಸಮಾಜದ ಹೆಸರಿನಲ್ಲಿ ಕೆ.ಶಿವನಗೌಡ ನಾಯಕರಿಗೆ ಬೆಂಬಲಿಸುವ ಬಗ್ಗೆ ನೀಡುತ್ತಿರುವ ಹೇಳಿಕೆಯನ್ನು ಇಲ್ಲಿನ ಪುರಸಭೆ ಮಾಜಿ ಸದಸ್ಯ ಪ್ರಭುಗದ್ಗಿ, ಕೆ. ಶಿವನಗೌಡ ಕುಪ್ಪಿ ಖಂಡಿಸಿದ್ದಾರೆ.
ಲಿಂಗಾಯತ ವಿಚಾರವಂತ ಸಮಾಜವಾಗಿದ್ದು, ಸಮಾಜಕ್ಕೆ ಗೌರವ ಕೊಡುವಂಥ ನಾಯಕರಿಗೆ ಬೆಂಬಲಿಸುತ್ತಾ ಬಂದಿದೆ. ಬಿಜೆಪಿಯಲ್ಲಿರುವ ಕೆಲ ಲಿಂಗಾಯತ ಸಮಾಜವರು ಬಿಜೆಪಿಗೆ ಬೆಂಬಲ ಸೂಚಿಸಿ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕಾರ್ಯ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಆತ್ಮಾವಲೋಕನ ಮಾಡಿಕೊಳ್ಳಿ: ಕಳೆದ 5 ವರ್ಷ ಅವಧಿಯಲ್ಲಿ ಲಿಂಗಾಯತ ಸಮಾಜದವರೊಂದಿಗೆ ಬಿಜೆಪಿ ಅಭ್ಯರ್ಥಿ ಯಾವ ರೀತಿಯಿಂದ ವರ್ತಿಸಿದ್ದಾರೆ ಎಂಬುದರ ಬಗ್ಗೆ ಬಿಜೆಪಿಯಲ್ಲಿರುವ ಲಿಂಗಾಯತ ಸಮಾಜದವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಲಿಂಗಾಯತ ಸಮಾಜದವರನ್ನು ಅವರು ಕಡೆಗಣಿಸಿದ್ದರಿಂದಾಗಿಯೇ ಅನೇಕ ಲಿಂಗಾಯತ ಮುಖಂಡರು ಬಿಜೆಪಿ ತೊರೆದಿದ್ದಾರೆಂದು ಹೇಳಿದ್ದಾರೆ.
ತಾಲೂಕಿನ ಲಿಂಗಾಯತ ಸಮಾಜ ಬಾಂಧವರು ಬಿಜೆಪಿಯಲ್ಲಿರುವ ಕೆಲವೇ ಕೆಲ ಸಮಾಜದ ಮುಖಂಡರ ಸುಳ್ಳು ಹೇಳಿಕೆಗೆ, ಊಹಾಪೋಹಕ್ಕೆ ಕಿವಿಗೊಡದಿರಲು ಮನವಿ ಮಾಡಿರುವ ಅವರು, ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement