ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಯೋಪ್ರಾ ಅಧ್ಯಕ್ಷ ಸ್ಥಾನಕ್ಕೆ ಎಸ್. ಶರಣೇಗೌಡ?

Rashmi Kasaragodu
Updated On : 7 Apr 2014, 11:39 am

ಸಿಂಧನೂರು: ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಎಸ್.ಶರಣೇಗೌಡ ನೇಮಕವಾಗುವ ಸಾಧ್ಯತೆಗಳು ಬಹುತೇಕ ದಟ್ಟವಾಗಿ ಹರಡಿವೆ. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನ್ಯಾಯವಾದಿ ಎಂ.ಕಾಳಿಂಗಪ್ಪ, ಗಂಗಾಮತ ಸಮಾಜದ ರಾಜ್ಯ ಉಪಾಧ್ಯಕ್ಷ ಎಸ್.ಪಿ.ನಾಗರಾಜ ವಕೀಲರ ಹೆಸರುಗಳು ಚಾಲ್ತಿಯಲ್ಲಿದ್ದವು. ಆದರೆ ಹಂಪನಗೌಡರ ಭವಿಷ್ಯದ ರಾಜಕೀಯ ಹಾಗೂ ಮುಂದಾಲೋಚನೆಯ ಫಲವಾಗಿ ಶರಣೇಗೌಡರ ಹೆಸರೊಂದೇ ಬೆಂಗಳೂರಿಗೆ ತಲುಪಿದೆ ಎಂದು ತಿಳಿದುಬಂದಿದೆ.


ಕಳಪೆ ಕಾಮಗಾರಿ: ಬಿಲ್ ತಡೆಗೆ ಆಗ್ರಹ


ಸಿಂಧನೂರು: ತಾಲೂಕಿನ ಇ.ಜೆ. ಹೊಸಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಾಜೀವ್ ಸೇವಾ ಕೇಂದ್ರ ಕಟ್ಟಡದ ಕಾಮಗಾರಿ ಕಳಪೆಯಾಗಿರುವುದರಿಂದ ಗುತ್ತಿಗೆದಾರರಿಗೆ ನೀಡುವ ಬಿಲ್ನು ತಡೆಹಿಡಿಯುವಂತೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ತಾಲೂಕು ಸಂಚಾಲಕ ಈರಣ್ಣ ಸುಲ್ತಾನಪುರ ಅವರು ಕಟ್ಟಡ ಕಾಮಗಾರಿಗೆ ರು. 20 ಲಕ್ಷ ಕ್ರಿಯಾ ಯೋಜನೆ ಅಳವಡಿಸಲಾಗಿದೆ. ಕಟ್ಟಡಕ್ಕೆ ನಿಗದಿತ ಪ್ರಮಾಣದ ಸ್ಟೀಲ್ ಹಾಕಿಲ್ಲ. ಕಳಪೆ ಸಿಮೆಂಟ್ ಬಳಸಲಾಗಿದೆ. ಗುಣಮಟ್ಟದ ಮರಳನ್ನು ಸಹ ಬಳಸಿರುವುದಿಲ್ಲ. ಇದರಿಂದ ಕಟ್ಟಡ ನಿರ್ಮಾಣಗೊಳ್ಳುವ ಹಂತದಲ್ಲಿ ಬಿದ್ದು ಹೋಗುವ ಸಂಭವ ಇರುವುದರಿಂದ ಕಟ್ಟಡ ಕಾಮಗಾರಿಯನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ನೀಡಬಾರದೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement