ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮನೆ ಹಂಚಿಕೆಯಲ್ಲಿ ಗ್ರಾಪಂ ಅಕ್ರಮ; ಆರೋಪ

Rashmi Kasaragodu
Updated On : 7 Apr 2014, 11:39 am

ಸಿಂಧನೂರು: ವಿವಿಧ ವಸತಿ ವಸತಿ ಯೋಜನೆಗಳಡಿ ಮನೆಗಳ ಹಂಚಿಕೆಯಲ್ಲಿ ತಾಲೂಕಿನ ಗೋನವಾರ ಗ್ರಾಮ ಪಂಚಾಯಿತಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ವೀರಮದಕರಿ ನಾಯಕ ಯುವ ವೇದಿಕೆ ತಾಲೂಕು ಅಧ್ಯಕ್ಷ ವಿಶ್ವನಾಥ ನಾಯಕ ಆರೋಪಿಸಿದರು. ಗೋನವಾರ ಪಂಚಾಯಿತಿಯಲ್ಲಿ ಆಗಿರುವ ಅವ್ಯವಹಾರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿ, ಮೂರು ವರ್ಷಗಳ ಅವಧಿಯಲ್ಲಿ ಕೇಳಿದ ವಸತಿ ಯೋಜನೆಯ ಅಗತ್ಯ ಮಾಹಿತಿ ಒದಗಿಸುವಲ್ಲಿ ಪಂಚಾಯಿತಿಯವರು ವಿಫಲರಾಗಿದ್ದಾರೆ. ಕೇವಲ 174 ಮನೆಗಳ ಕಡತಗಳು ಮಾತ್ರ ಲಭ್ಯವಿದೆ. ಉಳಿದ ದಾಖಲೆಗಳು ಕಾಣೆಯಾಗಿದ್ದು ಭಾರಿ ಅವ್ಯವಹಾರದ ಶಂಕೆ ಹುಟ್ಟುಹಾಕಿವೆ. ಇನ್ನು ನೀಡಿರುವ ಕೆಲವೇ ದಾಖಲೆಗಳೂ ಸಮರ್ಪಕವಾಗಿಲ್ಲ. ಕೇವಲ ಪಿಡಿಒ ಹಾಗೂ ಫಲಾನುಭವಿಗಳ ಸಹಿಗಳಿವೆ. ಗ್ರಾಮಸಭೆ ನಡೆಸದೆ ಅನರ್ಹ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿರುವುದು ಇದರಿಂದ ಸಾಬೀತಾಗಿದೆ ಎಂದು ವಿವರಿಸಿದರು. ನರಸಪ್ಪ ನಾಯಕ ಮಾತನಾಡಿ, ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುತ್ತಿಲ್ಲ. ಕಳೆದ 5 ವರ್ಷಗಳಲ್ಲಿ ಮನೆ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಪಿಡಿಒ, ಗ್ರಾಮ ಪಂಚಾಯಿತಿ ಸದಸ್ಯರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement