'ಸಂವಿಧಾನ ಆಶಯ ಬಾಬೂಜಿಯಿಂದ ಸಾಕಾರ'
ಸಿಂಧನೂರು: ಅಂಬೇಡ್ಕರ್ ಅವರು ಸಂವಿಧಾನ ರಚಿಸಿಕೊಟ್ಟರೂ ಅವರ ಆಶಯ ಸಾಕಾರಗೊಳಿಸಿದ ಕೀರ್ತಿ ಭಾರತದ ಬಾಬು ಜಗಜೀವನ್ ರಾಮ್ ಅವರಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ ಜಗನ್ನಾಥ ರೆಡ್ಡಿ ಬಣ್ಣಿಸಿದರು. ಡಾ. ಬಾಬು ಜಗಜೀವನ್ ರಾಮ್ ಅವರ 107ನೇ ಜನ್ಮದಿನೋತ್ಸವ ಅಂಗವಾಗಿ ಕುಷ್ಟಗಿ ರಸ್ತೆಯ ಬಾಬು ಜಗಜೀವನರಾಮ್ ವೃತ್ತದಲ್ಲಿರುವ ಅವರ ಭಾಗಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪೌರಾಯುಕ್ತ ಬಿ. ಪ್ರಹ್ಲಾದ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜೆ.ಬಿ. ಹೂಗಾರ ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಿಇಒ ಅಮರಪ್ಪ ಭೋವಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ, ದುರುಗಪ್ಪ ಹಸಮಕಲ್, ಪಂಪಾಪತಿ ಇದ್ದರು.
ಗುಂಡಸಾಗರ ಗ್ರಾಮದಲ್ಲಿ...
ಲಿಂಗಸ್ಗೂರು ವರದಿ: ತಾಲೂಕಿನ ಗುಂಡಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಬಾಬು ಜಗಜೀವನರಾಂ ಅವರ 107 ನೇ ಜನ್ಮ ದಿನಾಚರಣೆ ಶನಿವಾರ ಆಚರಿಸಲಾಯಿತು. ಮುಖ್ಯಗುರು ಶರಣಪ್ಪ ಮೇಟಿ, ಖೈರವಾಡಗಿ ಪ್ರೌಢ ಶಾಲಾ ದೈಹಿಕ ಶಿಕ್ಷಕ ರಾಮನಗೌಡ, ಶಿಕ್ಷಕರಾದ ಮಹಾದೇವಪ್ಪ, ಅಲ್ಲಾಭಕ್ಷ, ಬಸವರಾಜ ಹುಬ್ಬಳ್ಳಿ, ಮೌನೇಶ ನಾಯಕ, ರೇಖಾ, ನೇತ್ರಾವತಿ, ಸುಧಾರಾಣಿ, ಅಮಿತಾ ಇದ್ದರು.