ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿಮ್ಮ ಅಮೂಲ್ಯ ಮತ ಮಾರಿಕೊಳ್ಳಬೇಡಿ'

Rashmi Kasaragodu
Updated On : 8 Apr 2014, 11:59 am

ಮುದಗಲ್: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರು ಮತದಾನದಲ್ಲಿ ಭಾಗವಹಿಸಬೇಕೆಂದು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ನಿಮ್ಮ ಆಯ್ಕೆ ಸೂಕ್ತವಾಗಿರಲಿ, ಯೋಚಿಸಿ ಮತ ಚಲಾಯಿಸಿ, ಮತದಾನ ಮಾಡುವುದು ನಿಮ್ಮ ಹಕ್ಕು, ನಿಮ್ಮ ಇಷ್ಟ ಆಗಲಿ, ಮತದಾನವನ್ನು ನಿರ್ಭಯವಾಗಿ ಮಾಡಿ, ಮತದಾನದ ಮೂಲಕ ನಿಮ್ಮ ಶಕ್ತಿಯನ್ನು ತೋರಿಸಿ, ಮತವನ್ನು ಮಾರದಿರಿ ಎನ್ನುವ ಘೋಷಣೆ ಕೂಗುವ ಮೂಲಕ ಮದಾನ ಜಾಗೃತಿ ನಡೆಸಿದರು. ನೀಲಮ್ಮ, ಗಿರಿಜಮ್ಮ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಚಾಂದಬಿ, ಬಸಮ್ಮ, ಹನುಮಮ್ಮ, ಜಯಶ್ರೀ, ಶ್ರೀದೇವಿ, ಸದಾ, ನೂರಮ್ಮ ಸೇರಿದಂತೆ ಎಲ್ಲ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement