ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಿವನಗೌಡ ನಾಯಕ ಪರ ನಿವೃತ್ತ ಡಿಐಜಿ ಟಿ.ಆರ್. ನಾಯಕ ಪ್ರಚಾರ

Rashmi Kasaragodu
Updated On : 8 Apr 2014, 12:19 pm

ಮುದಗಲ್: ರಾಯಚೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಪರವಾಗಿ ಬಿಜೆಪಿ ಮುಖಂಡರು ಪಟ್ಟಣದಲ್ಲಿ ಮತಯಾಚನೆ ಮಾಡಿದರು. ಮುಖಂಡರಾದ ನಿವೃತ್ತ ಡಿಐಜಿ ಟಿ.ಆರ್. ನಾಯಕ, ತಾಲೂಕು ಬಿಜೆಪಿ ಅಧ್ಯಕ್ಷ ಸಿದ್ದನಗೌಡ ಪಾಟೀಲ್ ಕಸಬಾ ಲಿಂಗಸ್ಗೂರು, ಮುದಗಲ್ ಬ್ಲಾಕ್ ಬಿಜೆಪಿ ಅಧ್ಯಕ್ಷ ಮುಬಿನಸಾಬ್, ತಾಲೂಕು ಹೂಗಾರ ಸಮಾಜದ ಅಧ್ಯಕ್ಷ ಮಲ್ಲಪ್ಪ ಹೂಗಾರ, ಮಲ್ಲಣ್ಣ ಸೇರಿದಂತೆ ಅನೇಕ ಕಾರ್ಯಕರ್ತರು ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳ ವಿಡಿಯೋ ಪ್ರದರ್ಶನವನ್ನು ಜನರಿಗೆ ತೋರಿಸುವ ಮೂಲಕ ಮತಯಾಚನೆ ಮಾಡಿದರು.


'ವೈಯಕ್ತಿಕ ನಿಂದನೆಯಲ್ಲಿ ಸಮಸ್ಯೆ ಮರೆತ ಕಾಂಗ್ರೆಸ್, ಬಿಜೆಪಿ'
ಲಿಂಗಸ್ಗೂರು: ಕಾಂಗ್ರೆಸ್ ಮತ್ತು ಬಿಜೆಪಿ ವೈಯಕ್ತಿಕ ನಿಂದನೆಯಲ್ಲಿ ತೊಡಗಿ ಜನರನ್ನು ನೈಜ ಸಮಸ್ಯೆಗಳಿಂದ ದಿಕ್ಕುತಪ್ಪಿಸುತ್ತಿವೆ. ಕ್ಷೇತ್ರದ ಜನರು ಅನುಭವಿಸುತ್ತಿರುವ ಸಮಸ್ಯೆಗಳು ಕಣ್ಣಿಗೆ ಕಾಣುತ್ತಿಲ್ಲವೆಂದು ರಾಯಚೂರು ಲೋಕಸಭಾ ಕ್ಷೇತ್ರದ (ಎಸ್‌ಯುಸಿಐ) ಪಕ್ಷದ ಅಭ್ಯರ್ಥಿ ಕೆ.ಸೋಮಶೇಖರ್ ಆರೋಪಿಸಿದರು. ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಪಕ್ಷದಿಂದ ಲಿಂಗಸ್ಗೂರು ಕ್ಷೇತ್ರದಾದ್ಯಂತ ಹಮ್ಮಿಕೊಂಡ ಜೀಪ್ ಜಾಥಾದಲ್ಲಿ ಭಾಗವಹಿಸಿ, ಈ ಹಿಂದಿನ ಸಂಸದರು ಹಾಗೂ ಇತರೆ ಜನಪ್ರತಿನಿಧಿಗಳು ಕ್ಷೇತ್ರದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ, ಭ್ರಷ್ಟಾಚಾರದಲ್ಲಿ ತೊಡಗಿ ಲೂಟಿ ಮಾಡುವುರಲ್ಲಿ ನಿರತರಾಗಿದ್ದರು. ಚಿನ್ನದ ನಾಡಿನ ಜನತೆ ತೀವ್ರ ಬಡತನದಲ್ಲಿ ನರಳುತ್ತಿದ್ದು, ಹಳ್ಳಿಗಳಲ್ಲಿ ಮೂಲ ಸೌಕರ್ಯವಿಲ್ಲದೆ ಜನತೆ ಗುಳೆ ಹೋಗುತ್ತಿದ್ದಾರೆ. ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಂದವಾಡಗಿ ಏತ ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ದೂರಿದರು. ಡಾ. ಟಿ.ಎಸ್. ಸುನೀತ್ ಕುಮಾರ, ಅಪರ್ಣಾ, ಮಹೇಶ್ ಚೀಕಲಪರ್ವಿ, ಶರಣಪ್ಪ ಉದ್ಬಾಳ್, ಚೇತನಾ ಬನಾರೆ, ಯುನುಸ್ ಪಾಶಾ, ಭರತ್,ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement