ಬಿಜೆಪಿ ಪರ ಬೆಂಬಲಿಗರ ಪ್ರಚಾರ
ದೇವದುರ್ಗ: ಪಟ್ಟಣದ ಪುರಸಭೆ ವ್ಯಾಪ್ತಿ ವಿವಿಧ ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಅವರ ಪರ ನಗರ ಘಟಕದಿಂದ ಸೋಮವಾರ ಮತ ಯಾಚಿಸಲಾಯಿತು. ಪಟ್ಟಣದ ಪೊಲೀಸ್ ಕಾಲನಿ, ನೇತಾಜಿ ಓಣಿ, ಅಬು ಮೊಹಲ್ಲಾ, ಸಿದ್ದರಾಮೇಶ್ವರ ಓಣಿ, ಪಾಟೀಲ್ ಓಣಿ, ಗೋಪಾಲಸ್ವಾಮಿ ಓಣಿ, ರಾಷ್ಟ್ರಪತಿ ಓಣಿ ಸೇರಿ ವಿವಿಧೆಡೆ ಬಿಜೆಪಿ ನಗರ ಘಟಕದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಪರ ಮತಯಾಚಿಸಿದರು. ಪುರಸಭೆ ವ್ಯಾಪ್ತಿಯ ನಿರಾಶ್ರಿತರಿಗೆ 5 ಸಾವಿರ ಮನೆ, ಪಟ್ಟಣದ ಜನತೆಗೆ ಕುಡಿವ ನೀರಿನ ತೊಂದರೆ ನಿವಾರಣೆಗೆ ನಿರಂತರ ನೀರು ಯೋಜನೆ, ರಸ್ತೆ ಅಗಲೀಕರಣ ಸೇರಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಂಡ ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕರನ್ನು ಬೆಂಬಲಿಸುವಂತೆ ಕಾರ್ಯಕರ್ತರು ಮನವಿ ಮಾಡಿದರು. ಪುರಸಭಾಧ್ಯಕ್ಷ ಫಕ್ರುದ್ಧೀನ್ ಗೌರಂಪೇಟೆ, ಉಪಾಧ್ಯಕ್ಷ ನಾಗಪ್ಪ ಉಪ್ಪಾರ, ಮುಖಂಡರಾದ ಯುನೂಸ್ ಶಹಾಪೂರಿ, ನಾಗಪ್ಪ ನಾಡದಾಳ, ಮದನಮೋಹನ್, ನಾಗರಾಜ ಅಕ್ಕರಕಿ, ಬುವಾಜಿ ಇದ್ದರು.