ರಾಹುಲ್ ಸಭೆ: ವಾಹನ ಜಪ್ತಿ
ರಾಯಚೂರು: ನಗರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಚುನಾವಣೆ ಪ್ರಚಾರ ಸಭೆಗೆ ಜನರನ್ನು ಕರೆ ತರುತ್ತಿದ್ದ ನಾಲ್ಕು ವಾಹನಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ವಾನುಮತಿ ಪಡೆಯದೇ ಚುನಾವಣೆ ಪ್ರಚಾರ ಸಭೆಗೆ ಕಾರ್ಯಕರ್ತರನ್ನು ಕರೆ ತರುತ್ತಿದ್ದ ನಾಲ್ಕು ಕ್ರೂಸರ್ ವಾಹನಗಳನ್ನು ತಾಲೂಕಿನ ಏಳುಮೈಲ್ ಕ್ರಾಸ್ ಬಳಿ ತಡೆದು ತಪಾಸಣೆ ನಡೆಸಿದ ಅಧಿಕಾರಿಗಳು ಅನುಮತಿ ಪತ್ರವಿಲ್ಲದ್ದರಿಂದ ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.