ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವೀರಶೈವರ ವಿರೋಧಿಯಲ್ಲ

Mainashree
Updated On : 10 Apr 2014, 11:25 am

ಕ.ಪ್ರ. ವಾರ್ತೆ ್ಣ ಯಾದಗಿರಿ ್ಣ ಏ.9
ರಾಯಚೂರು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರು ಎಲ್ಲ ಜನಾಂಗದವರನ್ನು ಸಮಾನವಾಗಿ ಕಾಣುತ್ತಾರೆ. ಅವರು ವೀರಶೈವ ಸಮಾಜದ ವಿರೋಧಿಯಲ್ಲ ಎಂದು ರಾಯಚೂರು ಜಿಲ್ಲಾ ವೀರಶೈವ ಸಮಾಜದ ಕೋಶಾಧ್ಯಕ್ಷ ಕೆ.ಎಂ. ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಶಿವನಗೌಡರು ಎಲ್ಲ ಸಮಾಜದ ಜನರೊಂದಿಗೆ ಉತ್ತಮ ಸಂಬಂಧ ಹೊಂದುವ ಮೂಲಕ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅವರ ರಾಜಕೀಯ ಏಳಿಗೆ ಸಹಿಸದ ಪ್ರತಿಪಕ್ಷದ ಕೆಲವು ಮುಖಂಡರು ಮತಕ್ಷೇತ್ರದಲ್ಲಿ ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದರು.
ಎಲ್ಲ ಪಕ್ಷಗಳಲ್ಲಿ ವೀರಶೈವ ಸಮಾಜದ ನಾಯಕರಿದ್ದಾರೆ. ಅವರು ಚುನಾವಣೆಯಲ್ಲಿ ಆಯಾ ಪಕ್ಷದ ಕಾರ್ಯಕ್ರಮಗಳು ಹಾಗೂ ಅಭ್ಯರ್ಥಿಗಳ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ತಿಳಿಸಿ ಮತಯಾಚಿಸಬೇಕೇ ಹೊರತು ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
3 ದಶಕದಲ್ಲಾಗದ ಅಭಿವೃದ್ಧಿ 5 ವರ್ಷದಲ್ಲಿ: ನಾಯಕರು ದೇವದುರ್ಗ ತಾಲೂಕಿಗೆ ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟಿಗಟ್ಟಲೇ ಹಣ ಮಂಜೂರು ಮಾಡಿಸಿ ಕಳೆದ 30 ವರ್ಷದಿಂದ ಕಾಣದ ಅಭಿವೃದ್ಧಿಯನ್ನು ಕೇವಲ 5 ವರ್ಷಗಳಲ್ಲಿ ಆಗಿದೆ. ತಾಲೂಕಿಗೆ ಹಲವಾರು ಕಾಲೇಜುಗಳು, ರಸ್ತೆ ನಿರ್ಮಾಣ, ಸಾವಿರಾರು ಕುಟುಂಬಗಳಿಗೆ ಆಶ್ರಯ ಮನೆ ದೊರಕಿಸಿಕೊಟ್ಟಿದ್ದಾರೆ. ಯಾದಗಿರಿ ನೂತನ ಜಿಲ್ಲೆಯಾದರೂ ಸಂಚಾರಿ ಪೊಲೀಸ್ ಠಾಣೆ ಇಲ್ಲ. ಆದರೆ ದೇವದುರ್ಗದಲ್ಲಿದೆ. ನೀರಾವರಿ ಕ್ಷೇತ್ರ ವಿಸ್ತಾರವಾಗಲು ಶ್ರಮಿಸಿದ್ದಾರೆ ಎಂದರು.
ತಾಲೂಕಿನ ಹಾಗೂ ಜಿಲ್ಲೆಯಲ್ಲಿ ವೀರಶೈವ ಸಮಾಜದ ಮುಖಂಡರಿಗೆ ಹಲವಾರು ರಾಜಕೀಯ ಸ್ಥಾನಮಾನಗಳು ಸಿಗಲು ಅವರ ಪಾತ್ರ ಪ್ರಮುಖವಾಗಿದೆ. ಸಮಾಜದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಮಠ- ಮಾನ್ಯಗಳ ಅಭಿವವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಿಕೊಟ್ಟಿದ್ದಾರೆ ಎಂದು ವಿವರಿಸಿದರು.
ಇದೀಗ ಪಶ್ಚಾತ್ತಾಪ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಪ್ರತಿಪಕ್ಷದವರ ಅಪಪ್ರಚಾರದಿಂದ ಸ್ವಲ್ಪ ಮತಗಳ ಅಂತರದಿಂದ ಸೋತರು. ಆದರೂ ಧೃತಿಗೆಡದೆ ಜನರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎ.ವೆಂಕಟೇಶ ನಾಯಕ ಅವರನ್ನು ಗೆಲ್ಲಿಸಿದ ಮತದಾರರು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಲು ತೀರ್ಮಾನ ಕೈಗೊಂಡಿದ್ದಾರೆ. ಅವರ ಗೆಲವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಯಚೂರು ಸಂಸದರಾಗಿ ನಾಲ್ಕು ಬಾರಿ ಆಯ್ಕೆಯಾದ ಎ.ವೆಂಕಟೇಶ ನಾಯಕ ಅವರು ಮತಕ್ಷೇತ್ರದ ಪ್ರಗತಿಗೆ ಶ್ರಮಿಸಿಲ್ಲ. ಒಂದು ವೇಳೆ ಅವರು ಅಭಿವೃದ್ಧಿ ಕೈಗೊಂಡಿದ್ದರೆ ನಾವು ಬಹಿರಂಗವಾಗಿ ವೇದಿಕೆ ಅಡಿಯಲ್ಲಿ ಚರ್ಚೆಗೆ ಸಿದ್ಧ. ಇದರಿಂದ ಜನತೆಗೆ ವಾಸ್ತವಿಕ ಸತ್ಯ ತಿಳಿಯುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೊಪ್ಪುರ ಜಿಪಂ ಸದಸ್ಯ ಪ್ರಕಾಶ ಪಾಟೀಲ್, ಗಂಗಾಧರ ಎಲಿ, ಗೋಪಾಲರಡ್ಡಿ, ಶರಬಣ್ಣಗೌಡ, ನಾಗರಡ್ಡಿಗೌಡ ಗೊಬ್ಬೂರು, ದೇವಿಂದ್ರಪ್ಪಗೌಡ ಸುಲ್ತಾನಪುರ, ಬಸವರಾಜಪ್ಪಗೌಡ, ನೀಲಕಂಠರಾಯ ಎಲ್ಹೇರಿ, ಹಣಮಂತ ಇಟಗಿ,  ಪ್ರಶಾಂತರೆಡ್ಡಿ ಎಲ್ಹೇರಿ ಸೇರಿದಂತೆ ರಾಯಚೂರ ಜಿಲ್ಲೆಯ ವೀರಶೈವ ಸಮಾಜದ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement