ಲಿಂಗಸ್ಗೂರು: ಅನ್ನಪೂರ್ಣೇಶ್ವರಿ, ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನೆ
ಲಿಂಗಸ್ಗೂರು: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಅನ್ನಪೂರ್ಣೇಶ್ವರಿ ಹಾಗೂ ವೀರಭದ್ರೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಭಾನುವಾರ ಜರುಗಿತು.
ಬೆಳಗ್ಗೆ 7ರಿಂದ 9ರವರೆಗೆ ಜರುಗಿದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವು ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ದೇವರಭೂಪೂರ ಬೃಹನ್ಮಠದ ಅಭಿನವ ಗಜದಂಡ ಶ್ರೀಗಳು, ಯರಡೋಣ ಮುರುಘೇಂದ್ರ ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.
ಈ ವೇಳೆ ವೀರಭದ್ರ ದೇವರಿಗೆ ಪುರವಂತರ ಸೇವೆ ಹಾಗೂ ಗುಗ್ಗಳ ಕಾರ್ಯಕ್ರಮ ನಡೆಸಲಾಯಿತು. ನಂತರ ಪ್ರವಚನಕಾರ ಸೊಲ್ಲಾಪುರದ ವೇ. ಬಸವರಾಜ ಹಿರೇಮಠ ಶಾಸ್ತ್ರಿಗಳಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಮಂಗಲ ಕಾರ್ಯ ಜರುಗಿತು. ಈ ವೇಳೆ ಮುಖಂಡರಾದ ಎಂ.ಶ್ರೀನಿವಾಸರೆಡ್ಡಿ, ಡಾ. ಎನ್.ಎಲ್. ನಡುವಿನಮನಿ, ಗಿರಿರಾಜ ಹೊಸಮನಿ, ಸೋಮಶೇಖರ ಐದನಾಳ, ಮಲ್ಲಣ್ಣ ವಾರದ, ಜಿ.ವಿ. ಕೆಂಚನಗುಡ್ಡ, ಶಶಿಕಾಂತ ಕಾಡ್ಲೂರ, ಡಾ. ಶರಣಗೌಡ, ವಿರುಪಾಕ್ಷಪ್ಪ, ಬಸವರಾಜಗೌಡ ಗಣೇಕಲ್, ಶರಣಪ್ಪ ಅಂಗಡಿ, ಬಸವರಾಜ ಸಂತೆಕೆಲ್ಲೂರು, ಅಮರಣ್ಣ ಕಾರಲಕುಂಟಿ, ಗಣಪತಿ ನಾಯಕ ಇನ್ನಿತರರು ಇದ್ದರು.