ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಲವೆಡೆ ಮತದಾನ ಜಾಗೃತಿ ಕಾರ್ಯಕ್ರಮ

Lingaraj Badiger
Updated On : 16 Apr 2014, 12:05 pm

ಕ.ಪ್ರ. ವಾರ್ತೆ, ರಾಯಚೂರು, ಏ.15
ತಾಲೂಕಿನ ಲಿಂಗನಖಾನದೊಡ್ಡಿ ಗ್ರಾಪಂ ಸೇರಿದಂತೆ ವಿವಿಧೆಡೆ ಮತದಾರರ ಜಾಗೃತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಲಿಂಗನಖಾನದೊಡ್ಡಿ ಗ್ರಾಪಂ ವತಿಯಿಂದ ಸ್ವಸಹಾಯ ಸಂಘಗಳಿಗೆ ರಂಗೋಲಿ ಸ್ಪರ್ಧೆ ಹಾಗೂ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಗ್ರಾಮದ ಪ್ರಮುಖರು ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.
ಐಟಿಐ ಕಾಲೇಜು: ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವೀರಸಾವರ್ಕರ್ ಯುವಕ ಮಂಡಳಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಲೇಜಿನ ವಿದ್ಯಾರ್ಥಿಗಳಿಗೆ ಈ ವೇಳೆ ಕಡ್ಡಾಯ ಮತದಾನದ ಪ್ರತಿಜ್ಞೆ ಬೋಧಿಸಲಾಯಿತು. ಕಾಲೇಜಿನ ಪ್ರಾಚಾರ್ಯ ರಾಜೇಶ್ ಬಾವಗಿ, ಸಂಘದ ಪದಾಧಿಕಾರಿ ಗೋವಿಂದರಾಜು ಪಾಲ್ಗೊಂಡು ಮತದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಯುವಕ ಮಂಡಳಿಯ ಸಂಸ್ಥಾಪಕ ಎನ್.ವಿನಾಯಕರಾವ್ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ತೊರ್ಸಿ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ರಾಘವೇಂದ್ರ ಚಕ್ರವರ್ತಿ, ಮಂಜುನಾಥ್, ಹನುಮಂತರೆಡ್ಡಿ, ಶ್ರೀಕಾಂತ ಬಾಲಿ, ಪ್ರಶಾಂತಗೌಡ, ರವಿಕುಮಾರ್ ಕಾವಲಿ ಸೇರಿ ಅನೇಕರಿದ್ದರು. ಐಟಿಐ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾಡ್ಲೂರು ಗ್ರಾಪಂ: ತಾಲೂಕಿನ ಕಾಡ್ಲೂರು ಮತ್ತು ಎಚ್.ತಿಮ್ಮಾಪುರದಲ್ಲಿ ಗ್ರಾಪಂ ವತಿಯಿಂದ ಈಚೆಗೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಕಾಡ್ಲೂರು ಹಾಗೂ ಎಚ್.ತಿಮ್ಮಾಪುರದಲ್ಲಿ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಜಾಥಾ ನಡೆಸಲಾಯಿತು. ಕಾಡ್ಲೂರು ಗ್ರಾಪಂ ಮತ್ತು ಲೋಕ ಶಿಕ್ಷಣ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಪಂ ಪಿಡಿಒ ಪುಷ್ಪಲತಾ ಜಾಥಾಕ್ಕೆ ಚಾಲನೆ ನೀಡಿದರು.
ಪ್ರೇರಕ ಶಾಂತಕುಮಾರ್ ಸೇರಿದಂತೆ ಶಾಲೆಯ ಮುಖ್ಯಗುರುಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಜಾಥಾದಲ್ಲಿದ್ದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಜಾಗೃತಿ ಜಾಥಾ ನಡೆಯಿತು.
ಗಾಣದಾಳ ವೃತ್ತ: ತಾಲೂಕಿನ ಗಾಣದಾಳ ಗ್ರಾಮದಲ್ಲಿ ಇತ್ತೀಚೆಗೆ ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಿಂದ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗ್ರಾಮದ ಅಂಗನವಾಡಿ ಮೇಲ್ವಿಚಾರಕಿ ಶಾರದಾ ನೇತೃತ್ವದಲ್ಲಿ ಮತದಾರರ ಜಾಗೃತಿ ಅಂಗವಾಗಿ ಗ್ರಾಮದಲ್ಲಿ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಈ ಜಾಥಾದಲ್ಲಿ ಗಾಣದಾಳ ವೃತ್ತ ವ್ಯಾಪ್ತಿಯ ಗುಂಡ್ರವೇಲಿ, ಚಿಕ್ಕಮಂಚಾಲಿ, ಗಂಗವಾರ, ಬುಡದಿನ್ನಿ, ಬುಡದಿನ್ನಿಕ್ಯಾಂಪ್, ಆರ್.ಆರ್. ಕ್ಯಾಂಪ್ಗಳ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗುಂಡ್ರವೇಲಿ ಗ್ರಾಮದ ಸರ್ಕಾರಿ ಶಾಲೆಯ ಎಸ್ಡಿಎಂಸಿ ಸೂಗೂರಯ್ಯಸ್ವಾಮಿ, ಶಿಕ್ಷಕ ಸತ್ಯನಾರಾಯಣ ಸೇರಿದಂತೆ ಗ್ರಾಮದ ವಿವಿಧ ಸ್ವಸಹಾಯ ಸಂಘಗಳು ಹಾಗೂ ಗ್ರಾಮಸ್ಥರು ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement