ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚಕಮಕಿ, ಬಹಿಷ್ಕಾರ... ಆದರೂ ಶಾಂತಿಯುತ

Mainashree
Updated On : 18 Apr 2014, 10:34 am

ಕ.ಪ್ರ. ವಾರ್ತೆ ್ಣ ಸಿಂಧನೂರು ್ಣ ಏ.17
ತಾಲೂಕಿನಲ್ಲಿ ನಡೆದ ಮತದಾನದಲ್ಲಿ ಕೆಲ ಗೊಂದಲ, ಮಾತಿನ ಚಕಮಕಿ, ಮತದಾನ ಬಹಿಷ್ಕಾರದಂತಹ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ನಡೆಯಿತು.
ಬೆ.9 ಗಂಟೆಯಾದರೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಾರದಿರುವುದು ಕಂಡು ಬಂತು. 9 ಗಂಟೆಗೆ ಶೇ.8.38, 11ರ ವೇಳೆಗೆ ಶೇ.19.18, ಮ.1ಕ್ಕೆ ಶೇ.36.65, 3 ಗಂಟೆಗೆ ಶೇ. 45ರಷ್ಟು, ಸಂಜೆ 5ರ ವೇಳೆಗೆ ಶೇ. 57.30ರಷ್ಟು ಮತದಾನವಾಯಿತು.
ಮಾತಿನ ಚಕಮಕಿ: ಮತದಾನ ಆರಂಭವಾಗುತ್ತಿದ್ದಂತೆ ನಗರದ ಆದರ್ಶ ಕಾಲೋನಿಯ ಭೂತ್‌ನಲ್ಲಿ ನಾಲ್ಕೈದು ಬಿಜೆಪಿ ಕಾರ್ಯಕರ್ತರಿದ್ದುದಕ್ಕೆ ಕಾಂಗ್ರೆಸಿಗರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಹಿನ್ನೆಲೆಯಲ್ಲಿ ಯವುದೇ ಅಹಿತಕರ ಘಟನೆ ನಡೆಯಲಿಲ್ಲ.
ತಾಲೂಕಿನ ಕೋಳಬಾಳ ಗ್ರಾಮದಲ್ಲೂ ಬಿಜೆಪಿ-ಕಾಂಗ್ರೆಸ್ ನಡುವೆ ಕಿರಿಕಿರಿ ಉಂಟಾಗಿ ಪೋಲೀಸರ ಮಧ್ಯಸ್ಥಿಕೆಯಿಂದ ತಹಬದಿಗೆ ಬಂದಿತು. ತುರ್ವಿಹಾಳ ಗ್ರಾಮದ 6ನೇ ವಾರ್ಡ್‌ನಲ್ಲಿ ಎಲ್ಲ ಮತದಾರರು ಮುನ್ನಾ ದಿನವೇ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದರು. ಆದರೆ ಬೆ.8 ಗಂಟೆ ಸುಮಾರಿಗೆ ಮೂವರು ಮತ ಚಲಾಯಿಸಿದ್ದರಿಂದ ಜಗಳ ನಡೆಯಿತು. ನಂತರ ಗ್ರಾಮದ ಮುಖಂಡರು ಎರಡೂ ಕಡೆಯವರನ್ನು ಸಮಾಧಾನಪಡಿಸಿ ಮತದಾನ ಮಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ 8.30ರಿಂದ ಮತದಾನ ಸುಗಮವಾಗಿ ನಡೆಯಿತು. ರಂಗಾಪುರ ಬಳಿಯ ಪೈ ಕ್ಯಾಂಪಿನ ಮತಯಂತ್ರ ಬೆಳಗ್ಗೆ ಕೈಕೊಟ್ಟಿದ್ದರಿಂದ 20 ನಿಮಿಷಗಳ ನಂತರ ಮತದಾನ ಆರಂಭವಾಯಿತು.
ಬಿಗಿ ಬಂದೋಬಸ್ತ್: ನಗರ ಸೇರಿದಂತೆ ತಾಲೂಕಿನಾದ್ಯಂತ ಒಟ್ಟು 237 ಮತಗಟ್ಟೆಗಳಲ್ಲಿ ಆಯೋಗದ ಪೂರ್ವಸಿದ್ಧತೆಯಂತೆ ಮಿಲಿಟರಿ ಹಾಗೂ ಪೊಲೀಸ್ ಸರ್ಪಗಾವಲಿತ್ತು. ಅದರಲ್ಲೂ 48 ಅತಿಸೂಕ್ಷ, 82 ಸೂಕ್ಷ್ಮ, 107 ಸಾಮಾನ್ಯ ಮತಗಟ್ಟೆಗಳ ಮುಂದೆ ಖಾಕಿಗಳ ಖದರು ಬೆಚ್ಚಿಬೀಳಿಸುವಂತಿತ್ತು.
ಪ್ರಮುಖರ ಮತದಾನ: ಬಿಜೆಪಿ ಮುಖಂಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮತಗಟ್ಟೆ ಸಂಖ್ಯೆ 137ರಲ್ಲಿ, ಶಾಸಕ ಹಂಪನಗೌಡ ಬಾದರ್ಲಿ, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಬಿಜೆಪಿ ಮುಖಂಡ ರಾಜಶೇಖರ ಪಾಟೀಲ್ ಮತಗಟ್ಟೆ 111ರಲ್ಲಿ, ಜಿಪಂ ಅಧ್ಯಕ್ಷೆ ಲಲಿತಮ್ಮ ಪತಿ ಲಿಂಗರಾಜರೊಂದಿಗೆ ಸ್ವಗ್ರಾಮ ಹಂಚಿನಾಳ ಕೆ ಗ್ರಾಮದ ಮತಗಟ್ಟೆ ಸಂಖ್ಯೆ 215ರಲ್ಲಿ, ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಮತಗಟ್ಟೆ ಸಂಖ್ಯೆ 135 ರಲ್ಲಿ, ರಾಜಶೇಖರ ಪಾಟೀಲ್ ಕೋಟೆ ಶಾಲೆಯಲ್ಲಿ, ಮಾಜಿ ಶಾಸಕ ವೆಂಕಟರಾವ ನಾಡಗೌಡ ಜವಳಗೇರಾ ಗ್ರಾಮದ 21ನೇ ಮತಗಟ್ಟೆಯಲ್ಲಿ, ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ ದೇವಿಕ್ಯಾಂಪಿನಲ್ಲಿ, ಜಿಪಂ ಸದಸ್ಯರಾದ ಚಂದೂಸಾಬ್ ಮುಳ್ಳೂರು, ಇಂದ್ರಮ್ಮ ಮಲ್ಲನಗೌಡ ದಂಪತಿಗಳು ಸ್ವಗ್ರಾಮ ಕನ್ನಾರಿಯಲ್ಲಿ, ಶಿವನಗೌಡ ಎಲೆಕೂಡ್ಲಿಗಿಯಲ್ಲಿ, ಶಾಂತಮ್ಮ ದಯಾನಂದರೆಡ್ಡಿ ಹುಲ್ಲೂರಿನಲ್ಲಿ ಮತಚಲಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement