ಮತದಾನಕ್ಕೆ ಮಳೆ ಅಡ್ಡಿ
ರಾಯಚೂರು: ಲೋಕಸಭೆ ಚುನಾವಣೆಯ ಮತದಾನದ ವೇಳೆ ಗುರುವಾರ ಮಧ್ಯಾಹ್ನ ಲಿಂಗಸ್ಗೂರು ತಾಲೂಕಿನ ವಿವಿಧೆಡೆ ಮಳೆ ಸುರಿದಿದ್ದರಿಂದ ಮತದಾನಕ್ಕೆ ಅಡ್ಡಿ ಉಂಟಾಯಿತು. ಲಿಂಗಸ್ಗೂರು ಪಟ್ಟಣ ಹಾಗೂ ಹಟ್ಟಿ ಚಿನ್ನದ ಗಣಿ ಸುತ್ತಲಿನ ಪ್ರದೇಶದಲ್ಲಿ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಧಾರಾಕಾರ ಸುರಿದಿದ್ದರಿಂದ ಮತದಾನ ಪ್ರಕ್ರಿಯೆಗೆ ಅಡಚಣೆಯಾಯಿತು. ಮಳೆಯ ಕಾರಣ ಲಿಂಗಸ್ಗೂರು ತಾಲೂಕಿನ ಬಹುತೇಕ ಕಡೆ ವಿದ್ಯುತ್ ಕಡಿತಗೊಂಡಿದ್ದರಿಂದ ಮತಗಟ್ಟೆಯಲ್ಲಿ ಕತ್ತಲು ಆವರಿಸಿ ಸಿಬ್ಬಂದಿ ಮೇಣದ ಬತ್ತಿ ಸಹಾಯದಿಂದಲೇ ಮತದಾನ ಪ್ರಕ್ರಿಯೆ ಮುಂದುವರಿಸಲಾಯಿತು.