ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಸಿಲಿನ ತಾಪ ತಣಿಸಲು ಕಲ್ಲಂಗಡಿಗೆ ಮೊರೆ

Mainashree
Updated On : 21 Apr 2014, 10:39 am

ಸಿಂಧನೂರು: ಬಿಸಿಲಿನ ತಾಪಕ್ಕೆ ತಂಪು ಪಾನೀಯ ಬದಲು ನಾಗರಿಕರು ಕಲ್ಲಂಗಡಿಗೆ ಮೊರೆ ಹೋಗುತ್ತಿರುವುದು ನಗರದೆಲ್ಲೆಡೆ ಕಂಡು ಬಂದಿತು. ಉರಿಯುವ ಬಿಸಿಲಿನಲ್ಲಿ ವಿವಿಧ ಗ್ರಾಮಗಳಿಂದ ಬರುವ ನಾಗರಿಕರು ತಂಪಾದ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕೆಲವರು ಕಡಿಮೆ ದರದಲ್ಲಿ ಸಿಗುವ ಹೊಟ್ಟೆಗೆ ತಂಪು ನೀಡುವ ಕಲ್ಲಂಗಡಿ ಹಣ್ಣನ್ನು ಸವಿಯುತ್ತಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗ, ಕೋರ್ಟ್ ಮುಂಭಾಗ, ಬಸ್ ನಿಲ್ದಾಣ ರಸ್ತೆ, ಗಂಗಾವತಿ ರಸ್ತೆ ಮಾರ್ಗದಲ್ಲಿ ದೊಡ್ಡ ಟೆಂಟ್ ಹಾಕಿ ಕಲ್ಲಂಗಡಿ ಮಾರಾಟ ಮಾಡಲಾಗುತ್ತಿದೆ. 'ಏನೇ ಆಗಲಿ ತಂಪು ಪಾನೀಯ ಕುಡಿದು ಹಲವಾರು ರೋಗ ಪಡೆಯುವುದಕ್ಕಿಂತ ಕೆಂಪಗಿರುವ ಸಿಹಿಯಾದ ಕಲ್ಲಂಗಡಿಯನ್ನು ತಿನ್ನುವುದೇ ವಾಸಿ' ಎಂಬುದು ಸುಲ್ತಾನಪುರದ ಯುವಕ ಹನುಮಂತ ಕುಲಕರ್ಣಿ ಅಭಿಪ್ರಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement