ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

5 ಜಲವಿದ್ಯುತ್ ಉತ್ಪಾದನೆ ಘಟಕ ಸ್ಥಗಿತ

Vishwanath S
Updated On : 22 Apr 2014, 12:41 pm

ಲಿಂಗಸ್ಗೂರು: ಬಸವಸಾಗರ (ನಾರಾಯಣಪುರ) ಜಲಾಶಯ ಸೇರಿದಂತೆ ಕೃಷ್ಣಾ ನದಿ ನೀರನ್ನು ಬಳಸಿಕೊಂಡು ಉತ್ಪಾದಿಸಲಾಗುತ್ತಿದ್ದ ಒಟ್ಟು 5 ಜಲ ವಿದ್ಯುತ್ ಉತ್ಪಾದನೆ ಘಟಕಗಳನ್ನು ನೀರಿನ ಅಭಾವದಿಂದ ಸ್ಥಗಿತಗೊಳಿಸಲಾಗಿದೆ.
ಜಲಾಶಯದ ಎಡದಂಡೆ ಕಾಲುವೆಯ 0.00 ಕಿಮೀ ಹತ್ತಿರ ನಿರ್ಮಿಸಿದ ಮುರುಡೇಶ್ವರ ಪವರ್ ಕಾರ್ಪೋರೇಷನ್ ಜಲಾಶಯದ ಹಿನ್ನೀರನ್ನು ಬಳಸಿಕೊಂಡು 11.60 ಮೆ.ವ್ಯಾ. ಸಾಮರ್ಥ್ಯದ 2 ಘಟಕಗಳ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು ಕೃಷ್ಣಾ ನದಿ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದ್ದ ಮೆ. ಬರೂಕ್ ಪವರ್ ಕಾರ್ಪೋರೇಷನ್ ವಿದ್ಯುತ್ ಸ್ಥಾವರ ನಾರಾಯಣಪುರ ಜಲಾಶಯದ ಹುಣಸಗಿ ಉಪ ಕಾಲುವೆ ರಾಜನಕೋಳೂರು ಹತ್ತಿರ ಹಾಗೂ ಕೃಷ್ಣಾ ನದಿಯ ಜಲಾಶಯದಿಂದ 4.50 ಕಿಮೀ (ನಾರಾಯಣಪುರ) ಹತ್ತಿರದ 24 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ.
ನಾರಾಯಣಪುರ ಬಲದಂಡೆ 55ನೇ ಕಿಮೀ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ ನಾರಾಯಣಪುರ ಹೈಡ್ರೋ ಪವರ್ ಕಾರ್ಪೋರೇಷನ್ ಕಂಪನಿ (ಜಲಾಶಯದಿಂದ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿದ್ದ ನೀರನ್ನು ಬಳಸಿಕೊಂಡು) 12 ಮೆವ್ಯಾ ಸಾಮರ್ಥ್ಯದ 2 ಘಟಕಗಳನ್ನು ನೀರಿನ ಅಭಾವದಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ಅಲ್ಲದೆ, ಸುರಪುರ ತಾಲೂಕಿನ ಬೆಂಚನಗಡ್ಡಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿ ನದಿ ನೀರನ್ನು ಬಳಸಿಕೊಂಡು 24ರಿಂದ 75 ಮೆವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದ ಕೃಷ್ಣಾ ಹೈಡ್ರೋ ಎನರ್ಜಿ ಕಂಪನಿ ನದಿಯಲ್ಲಿ ನೀರಿನ ಅಭಾವದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ನಾರಾಯಣಪುರ ಜಲಾಶಯ ಮತ್ತು ಕೃಷ್ಣಾ ನದಿ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಾಗುತ್ತಿದ್ದ ಜಲವಿದ್ಯುತ್ ಯೋಜನೆಗಳು ನೀರಿನ ಅಭಾವದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ ಪರಿಣಾಮ ಲಿಂಗಸ್ಗೂರು, ಸುರಪುರ, ಮುದ್ದೇಬಿಹಾಳ ವ್ಯಾಪ್ತಿಯಲ್ಲಿ ಸರಬರಾಜು ಮಾಡಲಾಗುತ್ತಿದ್ದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement