ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಗ್ನಿಶಾಮಕ ಸಪ್ತಾಹ ಸಮಾರೋಪ

Rashmi Kasaragodu
Updated On : 22 Apr 2014, 11:53 am

ಸಿಂಧನೂರು: ಸ್ಥಳೀಯ ಅಗ್ನಿಶಾಮಕ ಠಾಣೆಯಿಂದ ರಾಷ್ಟ್ರೀಯ ಅಗ್ನಿ ಶಾಮಕ ಸಪ್ತಾಹದ ಅಂಗವಾಗಿ ಶರಣಬಸವೇಶ್ವರ ಪೆಟ್ರೋಲ್ ಬಂಕ್ ಆವರಣದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಠಾಣಾಧಿಕಾರಿ ರವಿ ಚವ್ಹಾಣ ಮಾತನಾಡಿ, ಅಗ್ನಿ ಅನಾಹುತ ಮುಂಜಾಗ್ರತ ಕ್ರಮಗಳ ಬಗ್ಗೆ ವಿವರಿಸಿದರು. ವಾಹನದಲ್ಲಿ ಪೆಟ್ರೋಲ್ ಹಾಕುವಾಗ ವಾಹನ ಚಾಲ್ತಿಯಲ್ಲಿರಬಾರದು. ಮೊಬೈಲ್ ನಿಷೇಧ ಕಡ್ಡಾಯ, ಧೂಮಪಾನ ನಿಷೇಧ, ಗ್ರಾಮಸ್ಥರು ವಿದ್ಯುತ್ ತಂತಿ ಹಾಯ್ದು ಹೋದ ಕೆಳಭಾಗದಲ್ಲಿ ಬಣವಿ ಹಾಕಬಾರದು. ಅಕ್ಕ-ಪಕ್ಕದಲ್ಲಿ 50 ಫೀಟ್ ಅಂತರವಿರಬೇಕು ಎಂದರು. ಇದೇ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಬಸವರಾಜ ಸಾಹುಕಾರ ವಕೀಲ ಹಾಗೂ ಸಾರ್ವಜನಿಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement