ಏಸುವಿಗಾಗಿ ಕ್ರೈಸ್ತರ ಓಟ
ವಾಡಿ/ಶಹಾಬಾದ್: ಏಸುವಿನ ಮರಣ ದಿನವಾದ ಗುಡ್ ಫ್ರೈಡೇ ಆಚರಣೆ ನಿಮಿತ್ತ ಪಟ್ಟಣದ ಮೆಥೋಡಿಸ್ಟ್ ಚರ್ಚ್ ವತಿಯಿಂದ ಶನಿವಾರ ಸಂಜೆ ಏಸುವಿಗಾಗಿ ಓಟ ಕಾರ್ಯಕ್ರಮದಡಿ ಮೌನ ಮೆರವಣಿಗೆ ನಡೆಸಲಾಯಿತು.
ಇಲ್ಲಿನ ಚರ್ಚ್ ಆವರಣದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗುತ್ತ ಸಾರ್ವಜನಿಕರಿಗೆ ಏಸುವಿನ ಸಂದೇಶ ರವಾನಿಸಲಾಯಿತು. ಫಾದರ್ ದೇವಕುಮಾರ್ ರೆವರೆಂಡ್ ಮಾತನಾಡಿದರು. ಕ್ರೈಸ್ತ ಮುಖಂಡರಾದ ಡಾ. ಜೇವಿಯರ ರೆಡ್‌ಸನ್ ನಾಲವಾರ, ಸಾಲೋಮನ್ ರಾಜಣ್ಣ, ವಿಜಯಕುಮಾರ ಭೀಮನಳ್ಳಿ ರಾವೂರ, ಬಬಿತಾ ದೇವಕುಮಾರ, ಕಮಲಾ ಎಸ್.ವಿ.ಕೆ., ರವಿಕುಮಾರ, ಅಬ್ರಾಹಂ ರಾಜಣ್ಣ, ಜಾನ್, ಸುಮಿತ್ರಾ, ಜಾರ್ಜ್ ಪ್ರಕಾಶ ಪಾಲ್ಗೊಂಡಿದ್ದರು.