ಗೋನಮರದಪ್ಪ ತಾತನ ಜಾತ್ರೆ
ಸಿಂಧನೂರು: ನಗರದ ಸುಕಾಲಪೇಟೆಯಲ್ಲಿ ಅರಗಿ ಪೂಜಾರಿ ಗೋನಮರದಪ್ಪ ತಾತನವರ ಗದ್ದಿಗೆ ಸಮಿತಿ ವತಿಯಿಂದ ಲಿಂ. ಗೋನಮರದಪ್ಪ ತಾತನವರ 7ನೇ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು. ಒಂದು ಜೋಡಿ ನವ ಜೀವನಕ್ಕೆ ಕಾಲಿಟ್ಟಿತು. ನಗರದ ಸುಕಾಲಪೇಟೆಯ ಹಾಲುಮತ ಸಮಾಜದ ಅರಗಿ ಪೂಜಾರಿಗಳಾದ ಲಿಂ. ಗೋನಮರದಪ್ಪ ತಾತನವರ 7ನೇ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಿಮಿತ್ತ ಬೆಳಗ್ಗೆ ತಾತನವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಿರೇಲಿಂಗಪ್ಪ ಪೂಜಾರಿ, ಎಚ್.ಹಿರೇಲಿಂಗಪ್ಪ, ಅರಗಿ ಹಿರೇಲಿಂಗಪ್ಪ, ಸಿದ್ಧಯ್ಯ ಗುರುವಿನ್, ಯಲ್ಲಪ್ಪ ಇದ್ದರು.