ಜಡಿಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ
ಮುದಗಲ್: ಪಟ್ಟಣ ಸಮೀಪದ ದೇಸಾಯಿ ಭೋಗಾಪುರ ಕಸ್ತೂರ ನಾಯ್ಕ ತಾಂಡಾದಲ್ಲಿ ಸೋಮವಾರ ಶಂಕರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಶಂಕರಲಿಂಗೇಶ್ವರ ದೇವರ ಭಾವಚಿತ್ರ ಹಾಗೂ ಕಳಸವನ್ನು ಹೊತ್ತು ಮೆರವಣಿಗೆ ಮಾಡಲಾಯಿತು. ಸುಮಂಗಲಿಯರಿಂದ ಕುಂಭ ಸೇವೆ, ಕನ್ನಡಿ, ಬಾಜಾ ಭಾಂತ್ರಿ, ಡೊಳ್ಳು ಕುಣಿತಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಮೆರವಣಿಗೆ ದೇವಸ್ಥಾನಕ್ಕೆ ತಲುಪಿದ ನಂತರ ದೇವರ ಗುಡಿಗೆ ಕಳಸಾರೋಹಣ ಮಾಡಲಾಯಿತು. ದೇವರ ಮೂರ್ತಿಗೆ ಅಭೀಷೆಕ, ವಿಶೇಷ ಪೂಜೆ ಮಾಡಲಾಯಿತು. ಮೆರವಣಿಗೆಯ ಸಾನ್ನಿಧ್ಯವನ್ನು ಕೆಸರಟ್ಟಿಯ ಶಂಕರಲಿಂಗ ಮಠದ ಶ್ರೀ ಸೋಮಲಿಂಗ ಸ್ವಾಮೀಜಿ ವಹಿಸಿದ್ದರು.
ಹೋಮ: ಶಂಕಲಿಂಗೇಶ್ವರ ಜಾತ್ರೆ ಅಂಗವಾಗಿ ದೇವಸ್ಥಾನದ ಮುಂಭಾಗದಲ್ಲಿ ಸೋಮಲಿಂಗ ಸ್ವಾಮೀಜಿ ಹಾಗೂ ಅಂಕಲಿಮಠದ ಕಿರಿಯ ಶ್ರೀಗಳಾದ ಫಕಿರೇಶ್ವರ ಸ್ವಾಮೀಜಿ, ಅಮರಗುಂಡ ದೇವರ ನೇತೃತ್ವದಲ್ಲಿ ಹೋಮ ಕಾರ್ಯಕ್ರಮ ಜರುಗಿತು.
ಬಂಜಾರ ಮುಖಂಡರಾದ ಶಂಕ್ರಪ್ಪ ಸೂಸೈಟಿ, ಮಾನಪ್ಪ ಆಶಿಹಾಳ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಪಾಪಣ್ಣ, ಮಾಜಿ ತಾಪಂ ಸದಸ್ಯೆ ಶಾಂತಮ್ಮ ತಿಪ್ಪಣ್ಣ ನಾಯ್ಕ, ಮಾಜಿ ಗ್ರಾಪಂ ಸದಸ್ಯೆ ಸುಲೋಚನಾ ಮಾರುತಿ ನಾಯ್ಕ, ರವಿಚಂದ್ರ ಶಾಸ್ತ್ರಿ, ಮಾರುತಿ ನಾಯ್ಕ, ಶರಣ ಹನುಮಂತ, ಶಂಕ್ರಪ್ಪ ಬಡಗಿ, ದೇವಪ್ಪ, ರಾಮಜಪ್ಪ. ರಾಮಚಂದ್ರ, ಯಂಕಪ್ಪ, ವೆಂಕಟೇಶ, ತಿಪ್ಪಣ್ಣ, ಮಾನಪ್ಪ, ಉಮೇಶ ಸೇರಿದಂತೆ ಅನೇಕರಿದ್ದರು.