ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಳೆ: ಜನಜೀವನ ಅಸ್ತವ್ಯಸ್ತ

Rashmi Kasaragodu
Updated On : 22 Apr 2014, 11:57 am

ಚಿಂಚೋಳಿ: ತಾಲೂಕಿನಲ್ಲಿ ಭಾನುವಾರ ಗುಡುಗು ಮಿಂಚಿನ ಆರ್ಭಟದ ಮಳೆಯಾಗಿದ್ದು, ಸುಲೇಪೇಟ ಗ್ರಾಮದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ತಾಲೂಕಿನ ಕಲ್ಲೂರರೋಡ, ಪೋಲಕಪಳ್ಳಿ, ಗರಗಪಳ್ಳಿ, ಭಕ್ತಂಪಳ್ಳಿ, ಪರದಾರ ಮೋತಕಪಳ್ಳಿ, ದಸ್ತಾಪುರ, ಯಾಕಾಪೂರ, ರಾಮತೀರ್ಥ, ಎಲಕಪಳ್ಳಿ ಗ್ರಾಮಗಳಲ್ಲಿ ಭಾನುವಾರ ಬೀಸಿದ ಬಿರುಗಾಳಿ ಮತ್ತು ಗುಡುಗು ಮಿಂಚಿನ ಮಳೆಯಾಗಿದ್ದು ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಜನಜೀವನಕ್ಕೆ ತೊಂದರೆಯಾಯಿತು.
ಮಳೆಯಿಂದಾಗಿ ಪ್ರಗತಿಯಲ್ಲಿರುವ ಚಿಂಚೋಳಿ- ಮಹಾಗಾಂವ, ಚಿಂಚೋಳಿ- ಸೇಡಂ ರಸ್ತೆಗಳು ಕೆಸರಿನಿಂದ ಕೂಡಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಚಿಂಚೋಳಿ- 0.5 ಮಿಮಿ, ಚಿಮ್ಮನಚೋಡ-2.2 ಮಿಮಿ, ಸುಲೇಪೇಟ-12.00 ಮಿಮಿ, ಕೋಡ್ಲಿ 9.02, ಕುಂಚಾವರಂ-4.2 ಮಿಮಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಶ್ರೀಮಂತ ಕನಕಪುರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement