ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಜ್ಜಲಗುಡ್ಡ ಶರಣಮ್ಮನವರ ವಿಜೃಂಭಣೆಯ ರಥೋತ್ಸವ

Rashmi Kasaragodu
Updated On : 22 Apr 2014, 11:53 am

ಮುದಗಲ್: ಸಮೀಪದ ಸುಕ್ಷೇತ್ರ ಸಜ್ಜಲಗುಡ್ಡ ಗ್ರಾಮದಲ್ಲಿ ಶಿವಶರಣೆ ಶರಣಮ್ಮ ನವರ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ಸಂಜೆ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹೋತ್ಸವದ ನಿಮಿತ್ತ ಬೆಳಗಿನ ಜಾವ ಅಮ್ಮನವರ ಗದ್ದುಗೆಗೆ ಭಕ್ತರಿಂದ ವಿಶೇಷ ಪೂಜೆ, ಅಯ್ಯಾಚಾರ, ಅಭಿಷೇಕ ಕಾರ್ಯಕ್ರಮ, ಕಳಸಾರೋಹಣ, ಉಚಿತ ಪ್ರಸಾದ ವ್ಯವಸ್ಥೆ ಜರುಗಿತು. ಸಂಜೆ 5 ಗಂಟೆಗೆ ಭಾಜಾ ಭಜಂತ್ರಿ, ಡೊಳ್ಳು ಕುಣಿತದೊಂದಿಗೆ ರಥೋತ್ಸವ ಕಾರ್ಯಕ್ರಮ ನಡೆಯಿತು.
ರಥೋತ್ಸವ ಕಾರ್ಯಕ್ರಮದಲ್ಲಿ ಕುಷ್ಟಗಿಯ ಮದ್ದಾನೇಶ್ವರ ಶ್ರೀಗಳು, ನಂದವಾಡಗಿಯ ಮಹಾಂತ ಶ್ರೀಗಳು, ದೊಡ್ಡಬಸವಾರ್ಯಚಾರ್ಯರು, ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ, ಸೇರಿದಂತೆ ಹರಗುರು ಚರಮೂರ್ತಿಗಳು ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಸೇರಿದಂತೆ ಮುದಗಲ್, ಇಳಕಲ್, ಬಿಜಾಪುರ, ಹುನಗುಂದ, ಬಾಗಲಕೋಟೆ, ಬದಾಮಿ, ಕುಷ್ಟಗಿ, ಸಿಂಧನೂರ, ರಾಯಚೂರು, ಗುಲ್ಬರ್ಗ ಸೇರಿದಂತೆ ವಿವಿಧೆಡೆಯ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಮುದಗಲ್ ಠಾಣೆಯ ಪಿಎಸ್‌ಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಂತರ ಸಂಜೆ ವಿವಿಧ ಮಠಾಧೀಶರುಗಳಿಂದ ಧಾರ್ಮಿಕ ಸಭೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement