ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಶುದ್ಧ ಕುಡಿಯುವ ನೀರಿನಿಂದ ತೊಂದರೆ

Rashmi Kasaragodu
Updated On : 23 Apr 2014, 12:06 pm

ಮುದಗಲ್: ತಾಲೂಕಿನ ಕೊನೆಯ ಹಳ್ಳಿ ಬ್ಯಾಲಿಹಾಳ ಗ್ರಾಮದಲ್ಲಿ ಕುಡಿಯಲು ಅಯೋಗ್ಯವಾದ ನೀರು ಇದ್ದುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮದಲ್ಲಿರುವ ಎಲ್ಲಾ ಬೋರವೆಲ್‌ಗಳು ಫ್ಲೋರೈಡ್‌ಯುಕ್ತವಾಗಿದ್ದರಿಂದ ಬಾಯಲ್ಲಿ ಹಾಕಿಕೊಂಡರೆ ವಾಂತಿ ಬರುವ ರೀತಿಯಲ್ಲಿವೆ. ಸಾಕಷ್ಟು ನೀರು ಇದ್ದರೂ, ಕುಡಿಯಲು ಯೋಗ್ಯವಿಲ್ಲ. ಗ್ರಾಮಸ್ಥರು ಪಕ್ಕದಲ್ಲೇ ಹರಿಯುತ್ತಿರುವ ಹಿರೇಹಳ್ಳದ ವರತಿ ನೀರನ್ನೆ ಕುಡಿಯುತ್ತಿದ್ದಾರೆ.
ಗ್ರಾಮಕ್ಕೆ ನೀರು ಸರಬರಾಜು ಮಾಡಲು ಲಕ್ಷಾಂತರ ರು. ವೆಚ್ಚ ಮಾಡಿ ನೀರು ಸಂಗ್ರಹ ತೊಟ್ಟಿಯನ್ನು ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಿದ್ದು, ಇದುವರಿಗೂ ನೀರು ಸಂಗ್ರಹವಾಗಿಲ್ಲ. ಬ್ಯಾಲಿಹಾಳ ಮತ್ತು ರಾಮತ್ನಾಳ ಗ್ರಾಮಕ್ಕೆ ಬೆಂಚಮಟ್ಟಿಯಿಂದ ಶುದ್ಧ, ಯೋಗ್ಯವಾದ ನೀರು ಸರಬರಾಜು ಮಾಡುವ ಸಲುವಾಗಿ ಬೋರವೆಲ್ ಹಾಕಿ ಪೈಪ್‌ಲೈನ್ ಮಾಡಲಾಗಿದೆ.
ವಿದ್ಯುತ್ ಸರಬರಾಜು ಮಾಡುವುದು ಮತ್ತು ನೀರು ಸಂಗ್ರಹಣಾ ತೊಟ್ಟಿಗೆ ಪೈಪ್ ಜೋಡಣೆ ಬಾಕಿ ಉಳಿದಿದೆ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಮುಖಂಡರಾದ ಅಮರೇಗೌಡ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement