ಶಿಕ್ಷಣದೊಂದಿಗೆ ಸೇವೆ ಭವಿಷ್ಯಕ್ಕೆ ದಾರಿದೀಪ
ಚಿತ್ತಾಪುರ: ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸೇವೆ, ಸೇವೆಯ ಮೂಲಕ ಶಿಕ್ಷಣ ಎಂಬ ಗುರಿಯೊಂದಿಗೆ ಜೀವನದಲ್ಲಿ ಅಳವಡಿಕೊಂಡು ನಡೆದರೆ ಭವಿಷ್ಯದಲ್ಲಿ ಉಪಯುಕ್ತ ದಾರಿ ದೀಪವಾಗುತ್ತದೆ ಎಂದು ಎಸ್‌ಬಿ ಕಾಲೇಜಿನ ಅಂಗ್ಲ ಸಹ ಪ್ರಾಧ್ಯಪಕಿ ಡಾ. ಇಂದಿರಾ ಶೆಟಕಾರ್ ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಗುಲ್ಬರ್ಗ ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಂಯುಕ್ತಾಶ್ರಯದ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯು ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ ತರುವದರ ಜೊತೆಗೆ ಅವರಲ್ಲಿ ಸೇವೆಯ ಬಗ್ಗೆ ಗೌರವ, ಕಾಯಕ ನಿಷ್ಠೆ, ಶಿಸ್ತು, ಸಹೋದರತ್ವ ಬೆಳೆಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಪಿಎಸೈ ಸಂಜುಕುಮಾರ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ರಾಜೇಶ ಅಜಬ್ ಸಿಂಗ್, ಪ್ರೊ. ಲಕ್ಷ್ಮೀಕಾಂತ ಶಿರೋಳ್ಳಿ, ಪ್ರೊ. ಮೇರಿ ಮಾಥ್ಯುಸ್ ಮಾತಾನಾಡಿದರು. ಪ್ರಾಚಾರ್ಯ ವಿಜಯಕುಮಾರ ಸಾಲಿಮನಿ ಅಧ್ಯಕ್ಷತೆ ವಹಿಸಿದ್ದರು.
ಕು. ದೀಪಾ ಪ್ರಾರ್ಥನೆ ಗೀತೆ ಹಾಡಿದರು. ಮಲ್ಲಮ್ಮ ಹಾಗೂ ಸಂಗಡಿಗರು ರಾಷ್ಟ್ರೀಯ ಸೇವಾ ಯೋಜನೆಯ ಗೀತೆ ಹಾಡಿದರು. ಪ್ರೊ. ಬಿ.ಕೆ. ಪಂಡಿತ್ ನಿರೂಪಿಸಿದರು. ಶಿವಯೋಗಿ ವಂದಿಸಿದರು.