ಆಲಿಕಲ್ಲು ಮಳೆ; ಬೆಳೆ ಹಾನಿ: 50 ಲಕ್ಷ ಬಿಡುಗಡೆ
ಲಿಂಗಸ್ಗೂರು: ತಾಲೂಕಿನಲ್ಲಿ ಮಾರ್ಚ್ ತಿಂಗಳಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಉಂಟಾದ ಜಾನುವಾರು ಸಾವನ್ನಪ್ಪಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ ಘಟನೆಗೆ ಸಂಬಂಧಿಸಿದಂತೆ ಪರಿಹಾರ ಒದಗಿಸಲು ರು. 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಕಾಲಿಕ ಆಲಿಕಲ್ಲು ಮಳೆಯಿಂದ ಆಗಿರುವ ಬೆಳೆ ನಷ್ಟಕ್ಕೆ ರಾಜ್ಯ ಪ್ರಕೃತಿ ಪರಿಹಾರ ನಿಧಿ ನಿಯಮಗಳ ಪ್ರಕಾರ ನೆರವು ವಿತರಿಸಬೇಕೆಂಬ ಸೂಚನೆಯಂತೆ ಪರಿಹಾರ ಧನ ವಿತರಿಸಲಾಗಿದೆ ಎಂದು ತಿಳಿದು ಬಂದಿದೆ. ಸುಮಾರು 8 ಕೋಟಿಗೂ ಅಧಿಕ ಹಾನಿಗೀಡಾಗಿದ್ದು, ಅಲ್ಲದೆ ಜಾನುವಾರುಗಳ ಸಾವು ಹಾಗೂ ಮನೆಗಳು ನಷ್ಟ ಹೊಂದಿದ್ದರೂ, ಕೇವಲ ರು. 50 ಲಕ್ಷ ಬಿಡುಗಡೆ ಮಾಡಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.