ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಾರ್ವತಿ- ಪರಮೇಶ್ವರ ಜಾತ್ರಾ ಆಚರಣೆ

Rashmi Kasaragodu
Updated On : 25 Apr 2014, 10:55 am

ಚಿಂಚೋಳಿ: ತಾಲೂಕಿನ ಕೊಳ್ಳೂರ ಗ್ರಾಮದಲ್ಲಿನ ಪುರಾತನ ಐತಿಹಾಸಿಕ ಪಾರ್ವತಿಪರಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಸೋಮವಾರ ಜರುಗಿತು.
ಪಾರ್ವತಿ ಪರಮೇಶ್ವರ ಪಲ್ಲಕ್ಕಿಯನ್ನು ಗ್ರಾಮದ ವಿವಿಧ ಓಣಿಗಳಲ್ಲಿ ಮೆರವಣಿಗೆ ನಡೆದ ನಂತರ ಪುರವಂತರರೊಂದಿಗೆ ಅನೇಕ ಭಕ್ತರು ಅಗ್ನಿಯನ್ನು ತುಳಿದು ತಮ್ಮ ಭಕ್ತಿ ಅರ್ಪಿಸಿದರು. ನಂತರ ಜರುಗಿದ ಧರ್ಮಸಭೆಯ ಸಾನಿಧ್ಯವಹಿಸಿದ್ದ ಬೇಮಳಖೇಡದ ಕಾಶಿನಾಥ ಸ್ವಾಮಿ ಮಾತನಾಡಿ, ಪಾರ್ವತಿ ಪರಮೇಶ್ವರ ಜೋಡಿ ಹೊಂದಿರುವ ದೇವಸ್ಥಾನವಾಗಿದೆ. ಇದೊಂದು ಅಪರೂಪದ ಐತಿಹಾಸಿಕ ದೇವಾಲಯವಾಗಿದೆ ಎಂದರು.
ಧಾರ್ಮಿಕ ಸಭೆಯಲ್ಲಿ ಗ್ರಾಮಸ್ಥರಾದ ಹಣಮಂತ ನಿರ್ಣ, ಗೋವಿಂದರೆಡ್ಡಿ ಮನ್ನಳಿ, ಹಣಮಂತರಾವ್ ಮಹಾರಾಜ ಕೊಡಂಬಲ, ಸುಭಾಶ್ಚಂದ್ರ ನಿಡಗುಂದ, ಅಧ್ಯಕ್ಷರು ಭೀಮರೆಡ್ಡಿ ಯಂಗಮನೊರ, ಮಡಿವಾಳಯ್ಯ ಸ್ವಾಮಿ, ಗ್ರಾಪಂ ಸದಸ್ಯ ಶಂಕರ ಚಿಂಚೋಳಿ, ರಾಜು ಜಾಡರ, ಗೋಪಾಲ ಬೆಮಳಗಿ, ಆನಂದ ಮುಲಗಿ, ಗೋಪಾಲ ಕೆ, ಮಹೇಶ ಬೆಮಳಗಿ ಇದ್ದರು.



ನಗರ ಸಂಕೀರ್ತನೆ
ಗುಲ್ಬರ್ಗ: ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ ಬಿದ್ದಾಪುರ ಕಾಲೋನಿಯ ರಾಘವೇಂದ್ರ ಮಠದಲ್ಲಿ 163ನೇ ನಗರ ಸಂಕೀರ್ತನೆಯನ್ನು ಏ.25 ಸಂಜೆ 4.30ಕ್ಕೆ ಹಮ್ಮಿಕೊಂಡಿದೆ. ಗೋಪಾಲಚಾರ್ಯ ಅಕಮಂಚಿ ಅಧ್ಯಕ್ಷತೆ ವಹಿಸುವರು. ಮಹಾಲಕ್ಷ್ಮೀ ಭಜನಾ ಮಂಡಳಿಯಿಂದ ಸಾಮೂಹಿಕ ಭಜನೆ ನಂತರ ಪ್ರವಚನೆ ನಡೆಯಲಿದೆ. ದಿ. ಜಗನ್ನಾಥರಾವ್ ಚಂಡ್ರಿಕಿ ಸ್ಮರಣಾರ್ಥ ಹರಿಕಥಾಮೃತ ಸಾರದ ಮಂಗಳಾಚರಣ, ಕರುಣಾ ಸಂಧಿ ಹಾಗೂ ಗೋಪಾಲದಾಸರ ಕೃತಿಗಳು ಹಾಗೂ ಜೀವನ ಚರಿತ್ರೆ ಬಗ್ಗೆ ಲಿಖಿತ ರೂಪದ ಸ್ಪರ್ಧೆಯನ್ನು ಆಗಸ್ಟ್ ತಿಂಗಳಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement