ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪೈಪ್ಲೈನ್ ಒಡೆದು ಕೊಳಚೆ ನೀರು ಸರಬರಾಜು

Rashmi Kasaragodu
Updated On : 25 Apr 2014, 10:55 am

ಶಹಾಬಾದ್: ಗರದ ಬಸವೇಶ್ವರ ಕಾಲೋನಿಯ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಎದುರು ಖಾಸಗಿ ವ್ಯಕ್ತಿಗಳು ಮನೆ ಕಟ್ಟಲು ಜೆಸಿಪಿಯಿಂದ ಅಗೆಯುತ್ತಿದ್ದಾಗ ಪೈಪ್ಲೈನ್ ಒಡೆದಿದ್ದರಿಂದ ಸ್ಥಳೀಯರು ಕೊಳಚೆ ನೀರು ಕುಡಿಯುವಂತಾಗಿದೆ. ಸ್ಥಳೀಯರ ಪ್ರಕಾರ ಉದ್ಯಾನ ವನವಿದ್ದ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಮನೆ ಕಟ್ಟಲು ಎರಡು ತಿಂಗಳ ಹಿಂದೆ ಜೆಸಿಪಿ ಬಳಸಿ ಬುನಾದಿ ಅಗೆಯುತ್ತಿದ್ದಾಗ ಪೈಪಲೈನ್ ಒಡೆದು ಹೋಗಿದೆ. ಅನಧಿಕೃತವಾಗಿ ಮನೆ ಕಟ್ಟಲಾಗುತ್ತಿದೆ ಎಂದು ಸ್ಥಳೀಯ ಬುಗ್ಗಪ್ಪ ಯಲ್ಲೇರಿ, ತಿಪ್ಪಣ್ ಮಾಸ್ಟರ ಬೆಲ್ಲದ, ರವಿ ಕಣಕಿಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಒಡೆದ ಪೈಪ್ಲೈನ್ ಹಾಗೆ ಉಳಿದಿದೆ. ಎರಡು ತಿಂಗಳಿನಿಂದ ನೀರು ಸೋರಿ, ತಗ್ಗಿನಲ್ಲಿ ನೀರು ನಿಲ್ಲುವುದರಿಂದ ಅದರಲ್ಲಿ ಹಂದಿಗಳು, ನಾಯಿ ತಾಣಗಳಾಗಿವೆ. ತಗ್ಗಿನಲ್ಲಿ ಶೇಖರವಾದ ನೀರು ಪೈಪ್ಲೈನ್ನಲ್ಲಿ ನುಗ್ಗಿ, ಕೊಳಚೆ ನೀರು ಸುಮಾರು 35 ರಿಂದ 40 ಮನೆಗಳಿಗೆ ಹರಿಯುತ್ತಿದೆ. ಎರಡು ತಿಂಗಳಿನಿಂದ ಜನ ಕೊಳಚೆ ನೀರು ಕುಡಿಯುವಂತಾಗಿದೆ. ಈ ಬಗ್ಗೆ ನಗರ ಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement