ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಲಿಕಾ ಸಾಮಗ್ರಿ ವಿತರಣೆ ಸಮಾರಂಭ

Rashmi Kasaragodu
Updated On : 26 Apr 2014, 12:17 pm

ದೇವದುರ್ಗ: ಶಿಕ್ಷಕರು ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವನೆ ಬೆಳೆಸಬೇಕೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಹ್ಮದ್ ಶೌಕತ್ ಉಲ್ಲಾ ಸಲಹೆ ನೀಡಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾವರ್ಧಕ ಸಂಘ ಸುರಪುರ ಸಂಚಾಲಿತ ಬಸವೇಶ್ವರ ಡಿ.ಇಡಿ ಕಾಲೇಜಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಕಲಿಕಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಗುರಿ- ಉದ್ದೇಶಗಳನ್ನಿಟ್ಟುಕೊಂಡು ಸತತ ಅಧ್ಯಯನದಲ್ಲಿ ತೊಡಗಬೇಕು. ಶೈಕ್ಷಣಿಕ ವರ್ಷದ ಕೊನೆ ವೇಳೆಯಲ್ಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸುವುದಕ್ಕಿಂತ ಪ್ರಾರಂಭದಲ್ಲಿಯೇ ವಿತರಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಬಸವರಾಜ ಬ್ಯಾಗವಾಟ್ ಅವರು, ಸಮಾಜ ಕಲ್ಯಾಣ ಇಲಾಖೆಯು ಕಾಲೇಜಿನ ಬಡ ವಿದ್ಯಾರ್ಥಿನಿಯರಿಗೆ ಒದಗಿಸಿದ ಕಲಿಕಾ ಸಾಮಗ್ರಿಗಳು, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ಬಾಲಕರಿಗೂ ವಿತರಿಸಬೇಕೆಂದು ಮನವಿ ಮಾಡಿದರು. ಡಯಟ್ ಪ್ರಮುಖರಾದ ರಾಮಚಂದ್ರಪ್ಪ ಶಿವಂಗಿ, ಕಾಲೇಜಿನ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಪ್ರಭಣ್ಣಗೌಡ, ಉಪನ್ಯಾಸಕರಾದ ಸಂಗಪ್ಪ ಬೀದರ್, ಕೇಮಣ್ಣ, ನರಸಣ್ಣ, ಮಹೇಂದ್ರ, ಮರಿಯಪ್ಪ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement