ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೊತ್ತಲ ಬಸವೇಶ್ವರ ಜಾತ್ರೆ ಇಂದು

Rashmi Kasaragodu
Updated On : 26 Apr 2014, 12:21 pm

ಸೇಡಂ: ಕೊತ್ತಲ ಬಸವೇಶ್ವರ ದೇವಾಲಯದ ಜಾತ್ರಾ ಮಹೋತ್ಸವನ್ನು ಏ. 26ರಂದು ಅದ್ಧೂರಿಯಾಗಿ ನಡೆಸಲಾಗುವುದು ಎಂದು ದೇವಸ್ಥಾನದ ಸದಾಶಿವ ಸ್ವಾಮಿಗಳು ಹೇಳಿದರು. ದೇವಸ್ಥಾನದಲ್ಲಿ ಆಯೋಜಿಸಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು 9 ನೇ ಶತಮಾನದ ದೇವಸ್ಥಾನವಾಗಿದೆ. ಇಲ್ಲಿ ಅಂದಿನ ಕಾಲದಲ್ಲಿಯೇ ಜಾತ್ರೆಯನ್ನು ಆರಂಭಿಸಲಾಗಿದೆ ಎಂದರು. 26ರಂದು ಅಗ್ನಿ ಪ್ರವೇಶ, ಸಂಜೆ ವಿಶ್ವಲಿಂಗ ವಿಷ್ಣು ಆಶ್ರಮದಿಂದ ನಂದಿಕೋಲು ಮೆರವಣಿಗೆ, ವೀರಸಂಗಪ್ಪ ತಡಕಲ್ ಪರಿವಾರದಿಂದ ಕಳಸ ಏರಿಸುವುದು. ನಂತರ ರಥೋತ್ಸವ ನಡೆಯಲಿದೆ. ರಾತ್ರಿ ಗೀಗೀ ಪದ ಕಾರ್ಯಕ್ರಮ ನಡೆಯಲಿದೆ. ಏ.27ರಂದು ಸಂಜೆ ದೇವಾಲಯದ ಆವರಣದಲ್ಲಿ ಧರ್ಮಸಭೆ ನಡೆಯಲಿದೆ. ಹುಲಸೂರ ಗುರುಬಸವೇಶ್ವರ ಸಂಸ್ಥಾನದ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಸೊನ್ನ ದಾಸೋಹ ಮಠದ ಡಾ. ಶಿವಾನಂದ ಸ್ವಾಮಿ, ಶಾಂತಲಿಂಗ ಶಿವಾಚಾರ್ಯ ಶ್ರೀಗಳಿಂದ ಶುಭನುಡಿ, ಹಾಲಪಯ್ಯ ಮಠದ ಪಂಚಾಕ್ಷರಿ ಸ್ವಾಮಿಗಳು, ಶಿವಶಂಕರ ಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement