ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಯುವ ಕವಿಗಳಿಗೆ 3 ದಿನ ಕಾವ್ಯ ಕಮ್ಮಟ

Rashmi Kasaragodu
Updated On : 26 Apr 2014, 12:22 pm

ಗುಲ್ಬರ್ಗ: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸಾಹಿತ್ಯ ಸಮುದಾಯದ ಸಹಯೋಗದೊಂದಿಗೆ ಮೇ 18, 19 ಮತ್ತು 20ರಂದು (3 ದಿನ) ಗುಲ್ಬರ್ಗದ ನಾವದಗಿಯಲ್ಲಿ ಕಾವ್ಯ ಕಮ್ಮಟವನ್ನು ನಡೆಸಲು ಉದ್ದೇಶಿಸಿದೆ. ಗುಲ್ಬರ್ಗ, ಯಾದಗಿರಿ ಹಾಗೂ ಬೀದರ್ ಜಿಲ್ಲೆಯ ಆಸಕ್ತ 35ರ ವಯೋವಾನದೊಳಗಿನ ಯುವಕವಿಗಳು ತಮ್ಮ ಸ್ವವಿವರದೊಂದಿಗೆ ಹಾಗೂ ಸ್ವರಚಿತ ಎರಡು ಕವನಗಳೊಂದಿಗೆ ಮೇ 3ರೊಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪುವಂತೆ ಸ್ವವಿಳಾಸ, ಫೋನ್ ಸಂಖ್ಯೆ ಹಾಗೂ ಇ-ಮೇಲ್ ಐಡಿ ಇದ್ದರೆ ಈ ಎಲ್ಲ ವಿವರಗಳೊಂದಿಗೆ ಅರ್ಜಿ ಹಾಕಬಹುದು. ಇದಕ್ಕಾಗಿ ಪ್ರತ್ಯೇಕ ಅರ್ಜಿ ನಮೂನೆ ಇರುವುದಿಲ್ಲ. ಅರ್ಜಿ ಕಳುಹಿಸಬೇಕಾದ ವಿಳಾಸ- ಕೆ. ನೀಲಾ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, ಫ್ಲಾಟ್ ನಂ- 242, ಸಂಗಾತಿ ವೀರೇಂದ್ರಪಾಟೀಲ್ ನಗರ, ಜಿಡಿಎ ಲೇಔಟ್, ಸೇಡಂ ರಸ್ತೆ, ಗುಲ್ಬರ್ಗ- 585 105. ಮೊ. 9448778796, 9972294759. ದೂ. 08472 237991. ಇ ಮೇಲ್- ಟಿಜಜಟಛ.್ಞ್ಜ್ಡಟಛಿಛ್ಠ್ಜಛಅ್ಜಟಛ್ಝಟ.್ಛ್ಟಟ ಆಯ್ಕೆಯಾದ ಅಭ್ಯರ್ಥಿಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಿಕೊಡಲಾಗುವುದು. ಸಾಮಾನ್ಯ ದರದ ಬಸ್ ದರದ ಪ್ರಯಾಣ ವೆಚ್ಚ ನೀಡಲಾಗುವುದು.
ಅಕ್ರಮ ಮರಳು ಸಾಗಣೆ: ಮನವಿ
ಗುಲ್ಬರ್ಗ: ತಾಲೂಕಿನ ಭೀಮಾ ನದಿಯಿಂದ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಂಡು ಕಳ್ಳತನದಿಂದ ಸಾಗಿಸುತ್ತಿರುವ ಮರಳು ಸಾಗಾಣಿಕೆ ಸ್ಥಗಿತಗೊಳಿಸಬೇಕೆಂದು ತಾಲೂಕಿನ ಫೀರೋಜಾಬಾದ್ ಗ್ರಾಪಂ ಸದಸ್ಯ ಅಬ್ದಲ್ ಲತೀಫ್ ಎಸ್. ಜಾಗೀರದಾರ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ತಾಲೂಕಿನ ವ್ಯಾಪ್ತಿಯಲ್ಲಿ ನಾಲ್ಕು ಸ್ಥಳಗಳಲ್ಲಿ ಒಂದೊಂದು ಸ್ಥಳದಲ್ಲಿ ಎರಡೆರಡು ಹಿಟಾಚಿ ಮಷಿನ್‌ಗಳಿಂದ ಮರಳು ಕಳ್ಳತನ ತಿಂಗಳ ಹಿಂದಿನಿಂದಲೂ ನಡೆಯುತ್ತಿದೆ. ಈ ಮರಳು ಸಾಗಾಣಿಕೆ ಗುಲ್ಬರ್ಗ ಹೆದ್ದಾರಿಯಿಂದಲೇ ಸಾಗಾಣಿಕೆಯಾಗುತ್ತಿದೆ. ಸರ್ಕಾರದ ಅಧಿಕಾರಿಗಳ ದೃಷ್ಟಿಗೆ ಅಕ್ರಮ ಮರಳು ಎಂದು ಕಂಡರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. 2 ತಿಂಗಳ ಹಿಂದೆ ಅಕ್ರಮ ಮರಳು ಸಾಗಾಣಿಕೆ ನಡೆದ ಸಮಯದಲ್ಲಿ 3-4 ಬಾರಿ ಮರಳು ಸಾಗಾಣಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಾಗ ಅವರು ಸೂಕ್ತ ಕ್ರಮ ಕೈಗೊಂಡು ಅಕ್ರಮ ಮರಳು ಸಾಗಾಣಿಕೆ ಸ್ಥಗಿತಗೊಳಿಸಿದರು. ಪ್ರಸ್ತತದಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತು ಸರ್ಕಾರಕ್ಕೆ ತಿಳಿಸಿದರೂ,  ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಸೂಕ್ತ ಕ್ರಮ ಕೈಗೊಂಡು ಅಕ್ರಮ ಮರಳು ಸಾಗಾಣಿಕೆ ಸ್ಥಗಿತಗೊಳಿಸಬೇಕೆಂದು ಕೊರಿದ್ದಾರೆ.
ಕಿಟ್ಸರ್ಡ್‌ನಿಂದ ಅರ್ಜಿ ಆಹ್ವಾನ
ಗುಲ್ಬರ್ಗ:  ಇಲ್ಲಿನ ಕೃಷ್ಣಾ ಸ್ವಯಂ ಉದ್ಯೋಗ ತರಬೇತಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮೇ 19ರಿಂದ 28 ರವರೆಗೆ ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆಯ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕನಿಷ್ಠ 8ನೇ ತರಗತಿ ಪಾಸಾದ ಮತ್ತು 18 ರಿಂದ 45 ವರ್ಷ ವಯೋವುತಿಯೊಳಗಿನ ನಿರುದ್ಯೋಗಿ ಅಭ್ಯರ್ಥಿಗಳು, ನಿರ್ದೇಶಕರು, ಕೃಷ್ಣಾ ಸ್ವಯಂ ಉದ್ಯೋಗ ತರಬೇತಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ,  33/1 ಸರ್ವೆ ನಂ.32, ದರಿಯಾಪುರ-ಕೋಟನೂರ ಜಿಡಿಎ ಬಡಾವಣೆ ಗುಲ್ಬರ್ಗ ಕಚೇರಿಗೆ ಮೇ 12ರೊಳಗೆ ಅರ್ಜಿ ಸಲ್ಲಿಸಬೇಕು. ಸಂಸ್ಥೆಯ ಕಚೇರಿಯಲ್ಲಿ ಮೇ 15ರಂದು ನಡೆಯುವ ಸಂದರ್ಶನಕ್ಕೆ ಅಗತ್ಯ ವಿದ್ಯಾಭ್ಯಾಸ ಮತ್ತು ವಯೋವುತಿ ಪ್ರಮಾಣಪತ್ರಗಳೊಂದಿಗೆ ಹಾಜರಾಗುವಂತೆ ಕೋರಿದೆ. ವಿವರಕ್ಕೆ ದೂ. 08472- 292003, ಮೊ.  9448994585 ಮತ್ತು 98864 63398 ಸಂಪರ್ಕಿಸಬಹುದು.
ಪಶುವೈದ್ಯಕೀಯ ದಿನಾಚರಣೆ ಇಂದು
ಗುಲ್ಬರ್ಗ: ನಗರದ ಪಶು ವೈದ್ಯಕೀಯ ಆವರಣದಲ್ಲಿ ಏ. 26ರಂದು ಕರ್ನಾಟಕ ಪಶು ವೈದ್ಯಕೀಯ ಪರಿಷತ್ತು, ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾಕು ಪ್ರಾಣಿಗಳಿಗೆ ನಾಯಿ ಹುಚ್ಚು ರೋಗದ(ರೇಬೀಸ್) ಉಚಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement