ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಈ ಬಾರಿಯೂ ಅದ್ಧೂರಿ ಮುಂಗಾರು ಸಾಂಸ್ಕೃತಿಕ ಹಬ್ಬ

Rashmi Kasaragodu
Updated On : 28 Apr 2014, 12:15 pm

ರಾಯಚೂರು: ನಗರದ ಮುನ್ನೂರು ಕಾಪು ಸಮಾಜದಿಂದ ಪ್ರತಿ ವರ್ಷದಂತೆ ಈ ವರ್ಷದ ಜೂನ್ 13, 14 ಮತ್ತು 15ರಂದು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಯಿತು.
ನಗರದ ಮುನ್ನೂರು ಕಾಪು ಶಿಕ್ಷಣ ಸಂಸ್ಥೆಯಲ್ಲಿ ಕರೆದಿದ್ದ ಸಭೆಯಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವರ್ಷದಂತೆ  ಪ್ರಸಕ್ತ ವರ್ಷವೂ ಮುಂಗಾರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲು ಮನವಿ ಮಾಡಿದರು.
ಮುನ್ನೂರು ಕಾಪು ಸಮಾಜದ ಎಲ್ಲರೂ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಯಶಸ್ಸಿಗೆ ಒಗ್ಗೂಡಿ ಶ್ರಮಿಸಬೇಕು. ಅಗತ್ಯ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದ ಅವರು, ಜೂ.13ರಂದು ಕರ್ನಾಟಕದ ಎತ್ತುಗಳಿಗೆ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ, ಜೂ.14 ಹಾಗೂ 15 ರಂದು ಕರ್ನಾಟಕ ಮತ್ತು ಆಂಧ್ರದ ಎತ್ತುಗಳಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ವಿವಿಧ ಸ್ಪರ್ಧೆಗಳು: ನಗರದ ರಾಜೇಂದ್ರ ಗಂಜ್ ಪ್ರದೇಶದಲ್ಲಿಯೇ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಜೂ.13 ರಂದು ಒಂದೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ.
 ಅದೇ ರೀತಿ ಜೂ.14 ರಂದು ಎರಡು ಟನ್ ಮತ್ತು ಜೂ.15ರಂದು ಎರಡೂವರೆ ಟನ್ ಕಲ್ಲು ಎಳೆಯುವ ಸ್ಪರ್ಧೆ ಎತ್ತುಗಳಿಗೆ ನಡೆಯಲಿದೆ ಎಂದು ವಿವರಿಸಿ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮೆರೆಯುವ ಎತ್ತುಗಳ ಮಾಲೀಕರಿಗೆ ಬಹುಮಾನ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಸಂದರ್ಭ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತಿತರೆ ರಾಜ್ಯಗಳ ಕಲಾ ವಿದರನ್ನು ಕರೆಯಿಸಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
  ಹಾಗೆಯೇ ಕಲ್ಲು ಗುಂಡು ಎತ್ತುವ ಸ್ಪರ್ಧೆ, ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲು ಸಭೆಯಲ್ಲಿ ಸಮ್ಮತಿಸಲಾಯಿತು.
ಅದೇ ರೀತಿ ಜೂ.14ರಂದು ನಗರದ ಪ್ರಮುಖ ರಸ್ತೆಯಲ್ಲಿ ಮುಂಗಾರು ಹಬ್ಬದ ಅಂಗವಾಗಿ ಎತ್ತುಗಳ ಮೆರವಣಿಗೆ ನಡೆಸಲಾಗುತ್ತದೆ.
 ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮಾಜಿ ಶಾಸಕ ಪಾಪಾರೆಡ್ಡಿ ಸಭೆಯಲ್ಲಿ ಮನವಿ ಮಾಡಿ ರೈತರ ಹಬ್ಬ ದಲ್ಲಿ ಎಲ್ಲರೂ ಪಾಲ್ಗೊಂಡು ರಾಯಚೂರು ನಗರದ ಹಬ್ಬವಾಗಿಸುವ ನಿಟ್ಟಿನಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮುನ್ನೂರು ಕಾಪು ಸಮಾಜದ ಪ್ರಮುಖರಾದ ಬೆಲ್ಲಂ ನರಸರೆಡ್ಡಿ, ಜಿ. ಬಸವರಾಜ ರೆಡ್ಡಿ, ರಾಳ್ಳ ತಿಮ್ಮಾರೆಡ್ಡಿ, ಬಂಗಿ ನರಸರೆಡ್ಡಿ, ಶೇಖರ ರೆಡ್ಡಿ, ಗೋಪಾಲ ರೆಡ್ಡಿ, ನಗರಸಭೆ ಸದಸ್ಯ ಎನ್. ಶ್ರೀನಿವಾಸ್ ಸೇರಿದಂತೆ ಅನೇಕರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement