ಅಭಿನಂದನಾ ಸಮಾರಂಭ ನಾಳೆ
ಗುಲ್ಬರ್ಗ: ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಅವರ ಸೇವಾ ನಿವೃತ್ತಿಯ ನಿಮಿತ್ತ ಏಪ್ರಿಲ್ 30 ರಂದು ಸೇಡಂನ ಸರ್ಕಾರಿ ನೌಕರರ ಭವನದಲ್ಲಿ ಸೇಡಂನ ಕರ್ನಾಟಕ ಸರ್ಕಾರಿ ನೌಕರ ಸಂಘ ಮತ್ತು ಅಭಿಮಾನಿಗಳ ಬಳಗ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ. ಏ.30 ರಂದು ಬೆಳಗ್ಗೆ 10.30ಕ್ಕೆ ಯಾರ್ಯಾರ ನೆನೆಯಲಿ ಸನ್ಮಿತ್ರರಿಗೆ ಸನ್ಮಾನ, ಮಧ್ಯಾಹ್ನ 12.30 ರಿಂದ 1.30 ರವರೆಗೆ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಅವರ ಆಪತ್ಭಾಂದವ ಅಭಿನಂದನಾ ಗ್ರಂಥ ಬಿಡುಗಡೆ, ಮದ್ಯಾಹ್ನ 2.30 ರಿಂದ 4 ರವರೆಗೆ ಸೇವಾ ನಿವೃತ್ತಿಯಾಗುತ್ತಿರುವ ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರಿಗೆ ಸನ್ಮಾನ ನಡೆಯಲಿದೆ ಎಂದು ಸಂಘ ಹಾಗೂ ಅಭಿಮಾನಿಗಳ ಬಳಗ ತಿಳಿಸಿದೆ.