ಇಂದು ಸ್ನೇಹ ಸಮ್ಮೇಳನ
ರಾಯಚೂರು: ನಗರದ ಶ್ರೀಕೃಷ್ಣಾ ಅಕಾಡೆಮಿಯ ಪಿಯು ಕಾಲೇಜಿನಲ್ಲಿ ಏ.29ರಂದು ಸ್ನೇಹ ಸಮ್ಮೇಳನ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸಂಜೆ 5.30ಕ್ಕೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಆಯೋಜಿಸಿದ್ದು, ಕಿಲ್ಲೇ ಬೃಹ್ಮನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಪ್ರಭಾರಿ ಡಿಡಿಪಿಯು ಕಲ್ಲಯ್ಯ, ವಾಣಿಜ್ಯೋದ್ಯಮಿ ಕೊಂಡಾ ಕೃಷ್ಣಮೂರ್ತಿ, ವಾಣಿಜ್ಯ ಉಪನ್ಯಾಸಕ ಸುದರ್ಶನ, ಲಿಟಲ್ ಎಂಜಲ್ ಶಾಲೆಯ ಕಾರ್ಯದರ್ಶಿ ತಮಿಮುದ್ದೀನ್, ಎಸ್ಎಲ್ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ರಜಾಕ್ ಉಸ್ತಾದ್ ಪಾಲ್ಗೊಳ್ಳಲಿದ್ದಾರೆಂದು ಕಾಲೇಜು ತಿಳಿಸಿದೆ.