ವಚನ ಕಮ್ಮಟ: ಸಂಕೇತ್ ಕಾಲೇಜ್ಗೆ 3ನೇ ರ್ಯಾಂಕ್
ಸಿಂಧನೂರು: ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯದ ಅರಿವು ಮೂಡಿಸಲು ಚಿತ್ರದುರ್ಗದ ಬಸವಕೇಂದ್ರ ಮುರುಘಾಮಠದಿಂದ ನಡೆಯುವ 2013-14ನೇ ಸಾಲಿನ ಪದವಿ ವಿಭಾಗದ ವಚನ ಕಮ್ಮಟ ಜಿಲ್ಲಾ ಮಟ್ಟದ ಪರೀಕ್ಷೆಯಲ್ಲಿ ಸಂಕೇತ್ ಕಾಲೇಜಿನ ಮೂರು ವಿದ್ಯಾರ್ಥಿಗಳು ರ್ಯಾಂಕ್ ಪಡೆದುಕೊಂಡಿದ್ದಾರೆ ಎಂದು ಸಂಯೋಜಕ ಮಲ್ಲಯ್ಯ ಹಿರೇಮಠ ತಿಳಿಸಿದ್ದಾರೆ. ಪ್ರಥಮ ವರ್ಷದ ಪದವಿಯಲ್ಲಿ ಶ್ವೇತಾ ಉದಯ ಶಂಕರ ಪ್ರಥಮ ರ್ಯಾಂಕ್, ದ್ವಿತೀಯ ವರ್ಷದ ಪದವಿ ವಿಭಾಗದಲ್ಲಿ ರೇಣಮ್ಮ ಯಂಕೋಬ ದ್ವಿತೀಯ ರ್ಯಾಂಕ್ ಹಾಗೂ ತೃತೀಯ ವರ್ಷದ ಪದವಿ ವಿಭಾಗದಲ್ಲಿ ಗಾಯತ್ರಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಉತ್ತಮ ತರಬೇತಿ ನೀಡಿದ್ದಕ್ಕಾಗಿ ಉಪನ್ಯಾಸಕ ಮಲ್ಲಯ್ಯ ಹಿರೇಮಠ ಹಾಗೂ ಪ್ರಾಚಾರ್ಯ ಪ್ರಕಾಶ ಹೆಚ್.ಹಚ್ಚೊಳ್ಳಿ ಇವರಿಗೆ ಶರಣ ಚೇತನ ಪ್ರಶಸ್ತಿ ನೀಡಲಾಗಿದೆ.
ಅಭಿನಂದನೆ: ವಚನ ಕಮ್ಮಟ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ತರಬೇತಿದಾರರನ್ನು ಸಂಕೇತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಬಸವರಾಜ, ಕಾರ್ಯದರ್ಶಿ ಅನಿಲರಾಜ್ ಅಭಿನಂದಿಸಿದ್ದಾರೆ.