ವಿಶೇಷ ಪುರಸ್ಕಾರ
ಗುಲ್ಬರ್ಗ: ಡಾ. ಕಾಶಿನಾಥ ಅಂಬಲಗಿರವರ ಅಕ್ಕಮಹಾದೇವಿ ಔರ್ ಸ್ತ್ರಿ ವಿಮರ್ಶಾ ಗ್ರಂಥಕ್ಕೆ ಬೆಂಗಳೂರಿನ ಜಯನಗರದ ಕರ್ನಾಟಕ ಹಿಂದಿ ಪ್ರಚಾರ ಸಮಿತಿಯು ತನ್ನ ಅಮೃತ ಮಹೋತ್ಸವ ವಿಶೇಷ ಪುರಸ್ಕಾರ ನೀಡಿದೆ. ಹನ್ನೆರಡನೆ ಶತಮಾನದ ವಚನ ಸಾಹಿತ್ಯ ಚಳುವಳಿಯಲ್ಲಿ ಅಕ್ಕಮಹಾದೇವಿಯ ನೆಲೆ ಬೆಲೆಗಳ ಕುರಿತು ಗ್ರಂಥ ಚರ್ಚಿಸುತ್ತದೆ. ಪುರಸ್ಕಾರ ಒಳಗೊಂಡಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ವಿ.ರಾ.ದೇವಗಿರಿ ತಿಳಿಸಿದ್ದಾರೆ.