ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾರ್ಮಿಕ ದಿನಾಚರಣೆ ನಾಳೆ

Rashmi Kasaragodu
Updated On : 30 Apr 2014, 11:51 am

ರಾಯಚೂರು: ಆಲ್ ಇಂಡಿಯಾ ಯುಟಿಯುಸಿ ಮತ್ತಿತರೆ ಸಂಘಟನೆಗಳಿಂದ 128ನೇ ಕಾರ್ಮಿಕ ದಿನಾಚರಣೆಯನ್ನು ಮೇ 1ರಂದು ಆಯೋಜಿಸಲಾಗಿದೆ.
ನಗರದ ಅಂಬೇಡ್ಕರ್ ವೃತ್ತದ ಹತ್ತಿರವಿರುವ ಸ್ಪಂದನ ಭವನದಲ್ಲಿ ಆಲ್ ಇಂಡಿಯಾ ಯುಟಿಯುಸಿ ಮತ್ತು ಇತರ ಕಾರ್ಮಿಕ ಸಂಘಟನೆಗಳೊಂದಿಗೆ ಬೆಳಗ್ಗೆ 11ಕ್ಕೆ ಮೇ ದಿನಾಚರಣೆ ಪ್ರಯುಕ್ತ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಗೆ ಭಾಷಣಕಾರರಾಗಿ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಟಿ.ಎಸ್. ಸುನೀತ್‌ಕುಮಾರ್, ಕೆಎಸ್ಸಾರ್ಟಿಸಿ ನೌಕರರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ರೆಡ್ಡಿ, ಪ್ರಮುಖರಾದ ಎಂ.ಎಂ. ಬಾಗಲಿ, ತಿಪ್ಪಣ್ಣ, ರಾಮಕೃಷ್ಣ, ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ಸಂಘಟನೆ ಪ್ರಕಟಣೆ ತಿಳಿಸಿದೆ.
ಸಭೆ ಅಧ್ಯಕ್ಷತೆಯನ್ನು ವೀರೇಶ್ ಎನ್.ಎಸ್. ವಹಿಸಲಿದ್ದಾರೆ. ಮೇ ದಿನ ದುಡಿಯುವ ಜನರಿಗೆ ಅತ್ಯಂತ ಮಹತ್ವದ ದಿನ. ಹಿಂದೆ ದಿನಕ್ಕೆ 16ರಿಂದ 18 ಗಂಟೆಗಳವರೆಗೆ ವಿಶ್ರಾಂತಿ, ಮನರಂಜನೆಯಿಲ್ಲದೆ ದುಡಿಯುವಂಥ ಸ್ಥಿತಿಯಿತ್ತು. ಇಂಥ ಶೋಷಣೆ ವಿರೋಧಿಸಿ ನಡೆದ ಹೋರಾಟದ ಫಲವಾಗಿ ಸದ್ಯ 8 ಗಂಟೆಗೆ ದಿನದ ದುಡಿಮೆಯ ಅವಧಿ ನಿಗದಿಯಾಗಿದೆ ಎಂದು ಸಂಘಟನೆ ತಿಳಿಸಿದೆ.
ಮೇ ದಿನಾಚರಣೆ ಯಶಸ್ವಿಗೊಳಿಸಲು ಎಲ್ಲಾ ದುಡಿಯುವ ಜನರು ಭಾಗವಹಿಸಬೇಕೆಂದು ಸಂಘಟನೆ ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement